ಸಾರಾಂಶ
ಭೋಪಾಲ್: ನಟ ಸೈಫ್ ಅಲಿ ಖಾನ್ ಅವರ ಕುಟುಂಬಕ್ಕೆ ಅನುವಂಶಿಕವಾಗಿ ಬಂದಿದ್ದ 15000 ಕೋಟಿ ರು.ಮೌಲ್ಯದ ಆಸ್ತಿ ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ಈ ಬಗ್ಗೆ ಈ ಹಿಂದೆ ವಿಚಾರಣಾಧೀನ ಕೋರ್ಟ್ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.
ಭೋಪಾಲ್‌ನ ಕೊನೆಯ ನವಾಬ ಹಮೀದುಲ್ಲಾ ಅವರ ಮೂವರು ಪುತ್ರಿಯರ ಪೈಕಿ ಎರಡನೇ ಪುತ್ರಿ ಸಜಿದಾ, ಭೋಪಾಲ್‌ನ ಇಫ್ತಿಕಾರ್ ಪಟೌಡಿಯನ್ನು ಮದುವೆಯಾಗಿದ್ದರು. ಈ ಮೂಲಕ ಭೋಪಾಲ್ ರಾಜಮನೆತನದ ಸೊಸೆಯಾಗಿ ಹೊರಹೊಮ್ಮಿದ್ದರು. ಸಹಜವಾಗಿ ರಾಜಮನೆತನದ ಆಸ್ತಿ ಸಜಿದಾಗೆ ಬಂದಿತ್ತು. ಮುಂದೆ ಇವರ ಮಗ, ಭಾರತದ ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಬಂದಿತ್ತು. ಬಳಿಕ ಅದು ಮನ್ಸೂರ್ ಪುತ್ರ ಸೈಫ್‌ಗೆ ಬಂದಿತ್ತು.
ಆದರೆ ಆಸ್ತಿ ಹಂಚಿಕೆಯಲ್ಲಿ ತಪ್ಪಾಗಿದೆ ಎಂದು ಹಮೀದುಲ್ಲಾ ಅವರ ಇತರೆ ಇಬ್ಬರು ಪುತ್ರಿಯರ ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದರು. ಅದನ್ನು ಅಧೀನ ನ್ಯಾಯಾಲಯ ವಜಾ ಮಾಡಿ, 15000 ಕೋಟಿ ರು. ಆಸ್ತಿಗೆ ಸೈಫ್ ಕುಟುಂಬವೇ ಮಾಲೀಕತ್ವ ಹೊಂದಿದೆ ಎಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಇದೀಗ ಹೈಕೋರ್ಟ್ ವಜಾ ಮಾಡಿದೆ.