ರಾಜಸ್ಥಾನ: ಇಬ್ಬರು ಗೆಹ್ಲೋಟ್ ಆಪ್ತ ಮಾಜಿ ಸಚಿವರು ಬಿಜೆಪಿಗೆ

| Published : Mar 11 2024, 01:16 AM IST

ರಾಜಸ್ಥಾನ: ಇಬ್ಬರು ಗೆಹ್ಲೋಟ್ ಆಪ್ತ ಮಾಜಿ ಸಚಿವರು ಬಿಜೆಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದಲ್ಲಿ ಅಶೋಕ್‌ ಆಪ್ತರಾಗಿದ್ದ ಮಅಜಿ ಕೇಂದ್ರ ಸಚಿವ ಲಾಲ್‌ಚಂದ್‌ ಕಟಾರಿಯಾ, ಸೇವಾದಳ ಮಾಜಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರೂ ಸೇರಿ ಹಲವರು ಬಿಜೆಪಿಗೆ ಜಂಪ್‌ ಆಗಿದ್ದಾರೆ.

ಜೈಪುರ: ಲೋಕಸಭೆ ಚುನಾವಣೆಗೂ ಮುನ್ನ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ನ ಆಪ್ತರಾಗಿದ್ದ ಇಬ್ಬರು ಮಾಜಿ ಸಚಿವರು, ಕಾಂಗ್ರೆಸ್‌ ಸೇವಾದಳ ಮಾಜಿ ರಾಜ್ಯಾಧ್ಯಕ್ಷರೂ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗದರು. ಪ್ರಮುಖವಾಗಿ ಮಾಜಿ ಸಚಿವ ಲಾಲ್‌ಚಂದ್‌ ಕಟಾರಿಯಾ, ಮಾಜಿ ಸಚಿವ ರಾಜೇಂದ್ರ ಯಾದವ್‌, ಮಾಜಿ ಕಾಂಗ್ರೆಸ್‌ ಸೇವಾದಳ ಅಧ್ಯಕ್ಷ ಸುರೇಶ್‌ ಚೌಧರಿ, ರಾಂಪಾಲ್ ಶರ್ಮಾ, ರಿಜು ಝುನ್‌ಝುನ್‌ವಾಲಾ, ಮಾಜಿ ಶಾಸಕರಾದ ರಿಚ್‌ಪಾಲ್‌ ಮಿರ್ಧಾ, ವಿಜಯ್‌ಪಾಲ್ ಮಿರ್ಧಾ ಮತ್ತು ಖಿಲಾಡಿ ಬೈರ್ವಾ ಅವರು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ, ರಾಜ್ಯಾಧ್ಯಕ್ಷ ಸಿಪಿ ಜೋಶಿ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.