ಥಾಣೆಯಲ್ಲಿ ನರ್ಸರಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ: ಆಕ್ರೋಶ

| Published : Aug 21 2024, 12:39 AM IST

ಥಾಣೆಯಲ್ಲಿ ನರ್ಸರಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ: ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಪ್ರತಿಷ್ಠಿತ ಶಾಲೆಯೊಂದಲ್ಲಿ ನರ್ಸರಿ ಓದುತ್ತಿರುವ ಇಬ್ಬರು ಮಕ್ಕಳ ಮೇಲೆ ಅದೇ ಶಾಲೆಯ ಗುಮಾಸ್ತ ಲೈಂಗಿಕ ದೌರ್ಜನ್ಯ ಎಸಗಿದ ಭೀಕರ ಘಟನೆ ನಡೆದಿದೆ.

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಪ್ರತಿಷ್ಠಿತ ಶಾಲೆಯೊಂದಲ್ಲಿ ನರ್ಸರಿ ಓದುತ್ತಿರುವ ಇಬ್ಬರು ಮಕ್ಕಳ ಮೇಲೆ ಅದೇ ಶಾಲೆಯ ಗುಮಾಸ್ತ ಲೈಂಗಿಕ ದೌರ್ಜನ್ಯ ಎಸಗಿದ ಭೀಕರ ಘಟನೆ ನಡೆದಿದೆ. ಆ.17ರಂದು ಶಾಲೆಯ ಶೌಚಾಲಯದಲ್ಲಿ ಆರೋಪಿ, 3 ಮತ್ತು 4 ವರ್ಷದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಅದಾದ ಬಳಿಕ ಗುಮಾಸ್ತನನ್ನು ಬಂಧಿಸಲಾಗಿದೆ. ಆದರೆ ಈ ಸುದ್ದಿ ಮಂಗಳವಾರ ಒಬ್ಬರಿಂದ ಒಬ್ಬರಿಗೆ ಹಬ್ಬಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಶಾಲೆಗೆ ನುಗ್ಗಿದ ಪೋಷಕರು ಮತ್ತು ಸಾರ್ವಜನಿಕರು ಕಟ್ಟಡ ಧ್ವಂಸ ಮಾಡಿದ್ದಾರೆ. ಜೊತೆಗೆ ಸಮೀಪದಲ್ಲೇ ಇದ್ದ ರೈಲ್ವೆ ನಿಲ್ದಾಣದ ಮೇಲೂ ದಾಳಿ ನಡೆಸಿ, ರೈಲು ತಡೆ ನಡೆಸಿದ್ದಾರೆ. ಹೀಗಾಗಿ ಬದ್ಲಾಪುರ ಮಾರ್ಗವಾಗಿ ಚಲಿಸಬೇಕಿದ್ದ ಹಲವು ರೈಲುಗಳ ಸಂಚಾರ ಬದಲಿಸಲಾಗಿದೆ.

ಈ ನಡುವೆ ಪೋಷಕರ ಆಕ್ರೋಶಕ್ಕೆ ಬೆಚ್ಚಿದ್ದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ಹಾಗೂ ಇಬ್ಬರು ಸಿಬ್ಬಂದಿ ಅಮಾನತು ಮಾಡಿದೆ. ಈ ನಡುವೆ ಘಟನೆ ಕುರಿತು ದೂರು ನೀಡಿದರೂ ಕ್ರಮ ಕೈಗೊಳ್ಳದ ಸ್ಥಳೀಯ ಪೊಲೀಸ್‌ ಠಾಣೆಯ ಸ್ಟೇಷನ್‌ ಇನ್‌ಚಾರ್ಸ್‌ ಅನ್ನು ವರ್ಗ ಮಾಡಲಾಗಿದೆ.

ಇದೇ ವೇಳೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಪ್ರಕರಣದ ತನಿಖೆಗೆ ಎಸ್‌ಟಿಐ ರಚನೆ ಮಾಡಲಾಗುವುದು. ಶೀಘ್ರ ತನಿಖೆಗೆ ಮುಕ್ತಾಯಕ್ಕೂ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ನೇಮಿಸಲಾಗುವುದು. ಆರೋಪಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಗೂ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.