ಪೊಲೀಸ್‌ ಆಶ್ರಯದಲ್ಲೇ ಶಾಜಹಾನ್‌ ಇದ್ದ; ಇ.ಡಿ. ಆರೋಪ

| Published : Mar 01 2024, 02:23 AM IST

ಸಾರಾಂಶ

55 ದಿನಗಳ ಕಾಲ ಶಾಜಹಾನ್ ಪೊಲೀಸ್‌ ಆಶ್ರಯದಲ್ಲೇ ಇದ್ದು, ಕೋರ್ಟ್‌ ಆದೇಶದ ಬಳಿಕ ಬಂಧನ ಅನಿವಾರ್ಯದ ಬಳಿಕ ಆತನನ್ನು ಸೆರೆ ಹಿಡಿದ ನಾಟಕ ಆಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಕೋಲ್ಕತಾ: ಸಂದೇಶ್‌ಖಾಲಿ ಮಹಿಳಾ ಅತ್ಯಾಚಾರ ಪ್ರಕರಣ ಹಾಗೂ ಭೂಕಬಳಿಕೆ ಪ್ರಕರಣ ಆರೋಪಿ ಶಾಜಹಾನ್‌ ಬಂಧನ ಕೇವಲ ತೋರಿಕೆಯದ್ದು. ಆತ ಇಷ್ಟು ದಿನ ಬಂಗಾಳ ಪೊಲೀಸ್‌ ಆಶ್ರಯದಲ್ಲೇ ಸುರಕ್ಷಿತವಾಗಿದ್ದ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಮೂಲಗಳು ಆರೋಪಿಸಿವೆ.

ಆತನನ್ನು ನಾವು ಬಂಧಿಸಲು ಹೋದಾಗ ಆತನ ಹಿಂಬಾಲಕರು ಆತನ ರಕ್ಷಣೆಗೆಂದು ನಮ್ಮ ಮೇಲೆ ದಾಳಿ ಮಾಡಿದರು.

ಆಗ ಆತ ತಪ್ಪಿಸಿಕೊಂಡು ಓಡಿಹೋದ. ಇದಕ್ಕೆ ಬಂಗಾಳ ಪೊಲೀಸರ ಶ್ರೀರಕ್ಷೆ ಇತ್ತು.

ಆತನನ್ನು ಅವರು ಸುರಕ್ಷಿತವಾಗಿಟ್ಟಿದ್ದರು.

ಈಗ ಹೈಕೋರ್ಟ್‌ ಆದೇಶಿಸಿರುವ ಕಾರಣ ಬಂಧನದ ನಾಟಕವಾಡುತ್ತಿದ್ದಾರೆ ಎಂದು ಇ.ಡಿ. ಮೂಲಗಳು ಹೇಳಿವೆ.