ಸೆನ್ಸೆಕ್ಸ್‌ ಒಂದೇ ದಿನ 800 ಅಂಕ ಪತನ: ₹ 2.25 ಲಕ್ಷ ಕೋಟಿ ನಷ್ಟ

| Published : Apr 13 2024, 01:04 AM IST / Updated: Apr 13 2024, 05:33 AM IST

ಸೆನ್ಸೆಕ್ಸ್‌ ಒಂದೇ ದಿನ 800 ಅಂಕ ಪತನ: ₹ 2.25 ಲಕ್ಷ ಕೋಟಿ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು

ನವದೆಹಲಿ/ಮುಂಬೈ: ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು. ಇದರಿಂದಾಗಿ ಹೂಡಿಕೆದಾರರು ಬರೋಬ್ಬರಿ 2.25 ಲಕ್ಷ ಕೋಟಿ ರು.ನಷ್ಟ ಅನುಭವಿಸಿದರು.

ಸೆನ್ಸೆಕ್ಸ್‌ ದಿನದ ಮಧ್ಯದಲ್ಲಿ 848.84 ಅಂಕ ಕುಸಿತದಿಂದ 74,189.31ಕ್ಕೆ ಕುಸಿದಿತ್ತು. ಆದರೆ ದಿನದಾಂತ್ಯಕ್ಕೆ 74,244.90ಕ್ಕೆ ಏರಿತು.

ನ್ಸೆಕ್ಸ್‌ನಲ್ಲಿ ಟಾಟಾ ಮೋಟರ್ಸ್‌, ಟಿಸಿಎಸ್‌ ಲಾಭ ಗಳಿಸಿದರೆ, ಸನ್‌ಫಾರ್ಮ, ಮಾರುತಿ, ಪವರ್‌ ಗ್ರಿಡ್‌, ಟೈಟಾನ್‌, ಟೆಕ್‌ ಮಹೀಂದ್ರಾ ಕಂಪನಿಗಳು ನಷ್ಟದಲ್ಲಿ ಮುಕ್ತಾಯಗೊಂಡಿತು.

ಒಟ್ಟು 2373 ಷೇರುಗಳು ನಷ್ಟದಲ್ಲಿ, 1466 ಷೇರುಗಳು ಲಾಭದಲ್ಲಿ ಹಾಗೂ 104 ಷೇರುಗಳು ಸ್ಥಿರವಾಗಿದ್ದವು.