ಸೋದರ ಆಂಧ್ರ ಸಿಎಂ ಜಗನ್‌ ಸರ್ವಾಧಿಕಾರಿ ಎಂದು ಶರ್ಮಿಳಾ ಟೀಕೆ

| Published : Feb 23 2024, 01:45 AM IST / Updated: Feb 23 2024, 08:41 AM IST

ಸೋದರ ಆಂಧ್ರ ಸಿಎಂ ಜಗನ್‌ ಸರ್ವಾಧಿಕಾರಿ ಎಂದು ಶರ್ಮಿಳಾ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಸಹೋದರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಶರ್ಮಿಳಾ ಟೀಕೆ ಮಾಡಿದ್ದಾರೆ.

ಹೈದರಾಬಾದ್‌: ರಾಜ್ಯದ ನಿರುದ್ಯೋಗಿ ಯುವಕರನ್ನು ಬೆಂಬಲಿಸಿ, ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ, ಸಿಎಂ ಜಗನ್ಮೋಹನ್‌ ರೆಡ್ಡಿ ಅವರ ವೈ.ಎಸ್‌ ಶರ್ಮಿಳಾರನ್ನು ಆಂಧ್ರ ಪೊಲೀಸರು ಗುರುವಾರ ಬಂಧಿಸಿದರು.

ಪ್ರತಿಭಟನೆಗೆ ಯಾವುದೇ ಅನುಮತಿ ಪಡೆಯದೇ ಪೊಲೀಸರ ಆದೇಶ ಪಾಲಿಸದ್ದಕ್ಕೆ ಶರ್ಮಿಳಾ ಹಾಗೂ ಇತರ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬಳಿಕ ಮಾತನಾಡಿದ ಅವರು ‘ಸಿಎಂ ಹಾಗೂ ಸರ್ಕಾರ ನನಗೆ ಹೆದರಿದೆ ಎಂದು ತೋರುತ್ತಿದೆ.

ನಾನು ಕಾರ್ಯದರ್ಶಿಗಳ ಬಳಿ ಹೋಗಿ ಯುವಕರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಕುರಿತು ಮನವಿ ಸಲ್ಲಿಸುತ್ತಿದ್ದೆ.

ಆದರೆ ಪ್ರತಿಭಟನೆಗಿಳಿದ ನಮ್ಮನ್ನು ಬಂಧಿಸಲಾಗಿದೆ. ವೈಎಸ್‌ಆರ್‌ಸಿಪಿ ಆಡಳಿತವು ಸರ್ವಾಧಿಕಾರದಂತಿದೆ’ ಎಂದು ಸಹೋದರನ ವಿರುದ್ಧ ಕಿಡಿಕಾರಿದರು.