ಬಾಲಿವುಡ್‌ ನಟಿ ಶಿಲ್ಪಾ ಶಿರೋಡ್ಕರ್‌ಗೆ ಕೋವಿಡ್‌

| N/A | Published : May 20 2025, 01:23 AM IST / Updated: May 20 2025, 04:49 AM IST

ಸಾರಾಂಶ

ಬಾಲಿವುಡ್‌ ನಟಿ ಶಿಲ್ಪಾ ಶಿರೋಡ್ಕರ್‌ ಅವರಿಗೆ ಸೋಮವಾರ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಮಾಹಿತಿಯನ್ನು ಶಿಲ್ಪಾ ಖುದ್ದು ಬಹಿರಂಗಪಡಿಸಿದ್ದಾರೆ.

ನವದೆಹಲಿ: ಬಾಲಿವುಡ್‌ ನಟಿ ಶಿಲ್ಪಾ ಶಿರೋಡ್ಕರ್‌ ಅವರಿಗೆ ಸೋಮವಾರ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಮಾಹಿತಿಯನ್ನು ಶಿಲ್ಪಾ ಖುದ್ದು ಬಹಿರಂಗಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿರುವ ಶಿಲ್ಪಾ, ‘ನನಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ದಯವಿಟ್ಟು ಎಲ್ಲರೂ ಮಾಸ್ಕ್‌ ಧರಿಸಿ, ಸುರಕ್ಷಿತರಾಗಿರಿ’ ಎಂದು ಬರೆದುಕೊಂಡಿದ್ದಾರೆ. ಶೀಘ್ರ ಗುಣಮುಖರಾಗುವಂತೆ ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕರು ಕಮೆಂಟ್‌ ಬರೆದಿದ್ದಾರೆ.

ಶಿಲ್ಪಾ ಅವರು 1990ರಲ್ಲಿ ‘ಬೆವಫಾ ಸನಂ’, ‘ಖುದಾ ಗವಾಹ್‌’ ಮತ್ತು ‘ಗೋಪಿ ಕಿಶನ್‌’ ಚಿತ್ರಗಳ ಮೂಲಕ ಜನರಲ್ಲಿ ಮನೆಮಾತಾಗಿದ್ದು, ಹಿಂದಿಯ ಬಿಗ್‌ಬಾಸ್‌ ಶೋನ 18ನೇ ಆವೃತ್ತಿಯಲ್ಲಿಯೂ ಭಾಗವಹಿಸಿದ್ದರು.

ಭಾರ​ತ​ದಲ್ಲಿ ಕೊರೋನಾ ಆತಂಕ​ವಿ​ಲ್ಲ: ಕೇಂದ್ರ

ನವದೆಹಲಿ: ಹಾಂಕಾಂಗ್‌ ಹಾಗೂ ಸಿಂಗಾ​ಪು​ರ​ದಲ್ಲಿ ಕೊರೋನಾ ಪ್ರಕ​ರಣ ಏರಿಕೆ ಕಂಡರೂ ಭಾರ​ತ​ದಲ್ಲಿ ಅಂಥ ಸ್ಥಿತಿ ಇಲ್ಲ. ಆತಂಕ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ​ಪ​ಡಿ​ಸಿದೆ. ಈ ನಡುವೆ ಮುಂಬೈನ ಕೆಇಎಂ ಆಸ್ಪ​ತ್ರೆ​ಯಲ್ಲಿ ಸಂಭ​ವಿ​ಸಿ​ದ 2 ಸಾವು​ಗ​ಳಿಗೆ ಕೊರೋನಾ ಕಾರ​ಣ​ವಲ್ಲ ಎಂದು ಸ್ಪಷ್ಟ​ಪ​ಡಿ​ಸ​ಲಾ​ಗಿದೆ. ಇದೇ ವೇಳೆ, ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಹಾಂಕಾಂಗ್‌ನಲ್ಲಿ 1,042 ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರದಲ್ಲಿ, ಪ್ರಕರಣಗಳ ಸಂಖ್ಯೆ 972 ಆಗಿತ್ತು. ಸಿಂಗಾ​ಪು​ರದಲ್ಲೂ ಕೇಸು​ಗಳು ಕೊಂಚ ಏರಿಕೆ ಕಂಡಿ​ವೆ.

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಪಾತ್ರದಲ್ಲಿ ನಟಿಸಿದ್ದ ನಟಿ ಬಂಧನ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾರ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ನುಸ್ರತ್ ಫರಿಯಾರನ್ನು ಇಲ್ಲಿಯ ಪೊಲೀಸರು ಕೊಲೆ ಯತ್ನ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.ಢಾಕಾದ ಶಹಜಹಾನ್ ಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಲೆ ಯತ್ನ ಪ್ರಕರಣವೊಂದರಲ್ಲಿ ನಟಿಯನ್ನು ಆರೋಪಿಯನ್ನಾಗಿಸಲಾಗಿದೆ.

 ಕಳೆದ ವರ್ಷ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಮಧ್ಯಂತರ ಸರ್ಕಾರ ರಚನೆಗೆ ಕಾರಣವಾದ ಪ್ರತಿಭಟನೆಗಳಿಗೆ ಪ್ರಕರಣ ಇದು ಸಂಬಂಧಿಸಿದೆ ಎನ್ನಲಾಗಿದೆ.ನಟಿಯನ್ನು ಸೋಮವಾರ ಬೆಳಿಗ್ಗೆ ಬಿಗಿ ಭದ್ರತೆ ನಡುವೆ ಇಲ್ಲಿಯ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನಟಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಟಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮೇ 22ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.

₹12,000 ಕೋಟಿ ಟ್ರಾಫಿಕ್ ದಂಡ: ಕೇವಲ ₹3000 ಕೋಟಿ ಸಂಗ್ರಹ

ನವದೆಹಲಿ: ಕಳೆದ ವರ್ಷ ದೇಶದಲ್ಲಿ ವಾಹನ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 12,000 ಕೋಟಿ ರು. ಮೊತ್ತದ ದಂಡ ಹಾಕಲಾಗಿದ್ದು, ಈ ಪೈಕಿ ಕೇವಲ 3,000 ಕೋಟಿ ರು. ಮೌಲ್ಯದ ದಂಡ ಮಾತ್ರ ಪಾವತಿಯಾಗಿದೆ. ಇನ್ನು 9 ಸಾವಿರ ಕೋಟಿ ರು. ಮೌಲ್ಯದ ದಂಡ ಬಾಕಿ ಉಳಿದಿದೆ ಎಂದು ವರದಿಯೊಂದು ಹೇಳಿದೆ.ಕಾರ್ಸ್‌ 24 ಹೊರತಂದ ಚಲನ್‌ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ. 

2024ರಲ್ಲಿ ಒಟ್ಟು 8 ಕೋಟಿ ಚಲನ್‌ಗಳು (ರಸೀದಿಗಳು) ವಿತರಣೆಯಾಗಿದ್ದು, ಇದರಲ್ಲಿ ಶೇ.55ರಷ್ಟು 4 ವಾಹನಗಳಿಗೆ ಶೇ.45ರಷ್ಟು ದ್ವಿಚಕ್ರ ವಾಹನಗಳಿಗೆ ದಂಡ ಹೇರಲಾಗಿದೆ. ಇನ್ನು ಗುರುಗ್ರಾಮ ಒಂದೇ ಕಡೆ ದಿನಕ್ಕೆ 10 ಲಕ್ಷ ರು. ದಂಡ ಸಂಗ್ರಹವಾಗುತ್ತಿದೆ. ಜೊತೆಗೆ ಬೆಂಗಳೂರಿನ ದ್ವಿಚಕ್ರ ವಾಹನವೊಂದರ ಮೇಲೆ 2.91 ಲಕ್ಷ ರು. ದಂಡ ಇದ್ದಿದ್ದನ್ನು ಸಹ ಅದು ಉಲ್ಲೇಖಿಸಿದೆ.

ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ವರುಣನ ಆರ್ಭಟ

ಚೆನ್ನೈ: ಚೆನ್ನೈ ಮತ್ತು ಉಪನಗರಗಳು ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ.ಬಂಗಾಳಕೊಲ್ಲಿ ಮೇಲಿನ ವಾಯುಪ್ರಸರಣವು ತಮಿಳುನಾಡು ಕರಾವಳಿಯ ಕಡೆಗೆ ಚಲಿಸಿದ್ದರಿಂದ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ, ಚೆಂಗಲ್ಪಟ್ಟು, ಉಲುಂಥೂರ್‌ಪೇಟೆ, ಮೈಲಾಡುತುರೈ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಡೀ ಮಳೆಯಾಗಿದ್ದು, ತಾಪಮಾನ ಕುಸಿದಿದೆ.

‘ಮುಂದಿನ 2-3 ದಿನಗಳಲ್ಲಿ ದಕ್ಷಿಣ ಅರಬ್ಬೀ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳು, ದಕ್ಷಿಣ ಬಂಗಾಳ ಕೊಲ್ಲಿ, ಮಧ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಅನುಕೂಲಕರ ಪರಿಸ್ಥಿತಿಗಳಿವೆ.ಹಾಗಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಮಳೆಯುಂಟಾಗಲಿದೆ’ ಎಂದು ಚೆನ್ನೈ ಹವಾಮಾನ ಕೇಂದ್ರದ ಮುಖ್ಯಸ್ಥೆ ಬಿ. ಅಮುಧಾ ಹೇಳಿದ್ದಾರೆ.

Read more Articles on