ಸಾರಾಂಶ
ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಸಿಧು ಮೂಸೆವಾಲಾ ಎಂದು ಜನಪ್ರಿಯವಾಗಿರುವ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಪೋಷಕರು ಐವಿಎಫ್ ತಂತ್ರದ ಮೂಲಕ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬಟಿಂಡಾ: ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಸಿಧು ಮೂಸೆವಾಲಾ ಎಂದು ಜನಪ್ರಿಯವಾಗಿರುವ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಪೋಷಕರು ಐವಿಎಫ್ ತಂತ್ರದ ಮೂಲಕ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ (60) ಫೇಸ್‌ಬುಕ್ ಖಾತೆಯಲ್ಲಿ ನವಜಾತ ಶಿಶುವಿನ ಜನನ ಘೋಷಿಸಿದರು. ಅವರ ಪತ್ನಿ ಚರಣ್ ಕೌರ್ ಮೂಸೆವಾಲಾ (58) ಶುಭದೀಪ್ ಅನ್ನು ಪ್ರೀತಿಸುವ ಕೋಟಿ ಜನರ ಆಶೀರ್ವಾದದೊಂದಿಗೆ ಕಿರಿಯ ಸಹೋದರನ ರೂಪದಲ್ಲಿ ಜನಿಸಿದ್ದಾನೆ ಎಂದು ಪೋಸ್ಟ್ ಮಾಡಿದ್ದಾರೆ.