ಕೇಂದ್ರ ಬಜೆಟ್ 2024 : ಆಹಾರ, ರಸಗೊಬ್ಬರ, ಇಂಧನ ಮೇಲಿನ ಸಬ್ಸಿಡಿ ಶೇ.7.8ರಷ್ಟು ಕಡಿತ

| Published : Jul 24 2024, 12:18 AM IST / Updated: Jul 24 2024, 07:49 AM IST

ಸಾರಾಂಶ

2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆಹಾರ, ರಸಗೊಬ್ಬರ, ಇಂಧನಗಳ ಮೇಲಿನ ಸಬ್ಸಿಡಿಯನ್ನು ಶೇ.7.8 ರಷ್ಟು ಕಡಿತಗೊಳಿಸಿದೆ. ಸಬ್ಸಿಡಿಗಳ ಹಂಚಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ 3.81 ಲಕ್ಷ ಕೋಟಿ ರು. ಹಣವನ್ನು ಹಂಚಿಕೆ ಮಾಡಲಾಗಿದೆ.

ನವದೆಹಲಿ :  2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆಹಾರ, ರಸಗೊಬ್ಬರ, ಇಂಧನಗಳ ಮೇಲಿನ ಸಬ್ಸಿಡಿಯನ್ನು ಶೇ.7.8 ರಷ್ಟು ಕಡಿತಗೊಳಿಸಿದೆ. ಸಬ್ಸಿಡಿಗಳ ಹಂಚಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ 3.81 ಲಕ್ಷ ಕೋಟಿ ರು. ಹಣವನ್ನು ಹಂಚಿಕೆ ಮಾಡಲಾಗಿದೆ. 

ಇದು ಕಳೆದ ಬಾರಿಗಿಂತ ಕಡಿಮೆಯಾಗಿದ್ದು, ಕಳೆದ ಬಾರಿ 4.13 ಲಕ್ಷ ಕೋಟಿ ರು. ನೀಡಲಾಗಿತ್ತು. ಆಹಾರ ಸಬ್ಸಿಡಿ ಹಂಚಿಕೆಯಲ್ಲಿ ಇಳಿಕೆಯಾಗಿದ್ದು, 2.05 ಲಕ್ಷ ಕೋಟಿ ರು. ಮೀಸಲಿರಿಸಲಾಗಿದೆ. ಈ ವರ್ಷದ ಮಾರ್ಚ್‌ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ 2.12 ಲಕ್ಷ ಕೋಟಿ ರು.ರಷ್ಟಿತ್ತು. 

ರಸಗೊಬ್ಬರ ಸಬ್ಸಿಡಿಯು ಅತಿ ಹೆಚ್ಚಿನ ಕಡಿತವನ್ನು ಕಂಡಿದೆ. 2023-24ನೇ ಸಾಲಿನಲ್ಲಿದ್ದ 1.88 ಸಾವಿರ ಕೋಟಿ. ರು.ರಷ್ಟಿತ್ತು. ಆದರೆ ಈ ಬಾರಿ 1.64 ಸಾವಿರ ಕೋಟಿ.ರು.ಗೆ ಕಡಿತ ಮಾಡಲಾಗಿದೆ. ಪೆಟ್ರೋಲಿಯಂ ಸಬ್ಸಿಡಿಗಳು ಮುಖ್ಯವಾಗಿ ಅಡುಗೆ ಸಿಲಿಂಡರ್ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದ್ದು, 2023-24ನೇ ಸಾಲಿನಲ್ಲಿ 12.24 ಸಾವಿರ ಕೋಟಿ ರು. ಅನುದಾನ ಆಗಿದ್ದ ಸಬ್ಸಿಡಿ ಈ ಬಾರಿ ಕಡಿತಗೊಂಡಿದ್ದು, 11.9 ಸಾವಿರ ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ.