ಸದಾ ಒಬ್ಬರ ಮೇಲೆ ಒಬ್ಬರು ಮಾತಿನ ಬಾಣ ಪ್ರಯೋಗಿಸುತ್ತಾ, ಬದ್ಧವೈರಿಗಳಂತಿರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಒಂದೇ ಕಡೆ ಮುಖಾಮುಖಿಯಾದರು. ಮುನಿಸು ಮರೆತು ಪರಸ್ಪರ ಆತ್ಮೀಯತೆಯಂತೆ ಮಾತನಾಡುತ್ತಾ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ನವದೆಹಲಿ: ಸದಾ ಒಬ್ಬರ ಮೇಲೆ ಒಬ್ಬರು ಮಾತಿನ ಬಾಣ ಪ್ರಯೋಗಿಸುತ್ತಾ, ಬದ್ಧವೈರಿಗಳಂತಿರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಒಂದೇ ಕಡೆ ಮುಖಾಮುಖಿಯಾದರು. ಮುನಿಸು ಮರೆತು ಪರಸ್ಪರ ಆತ್ಮೀಯತೆಯಂತೆ ಮಾತನಾಡುತ್ತಾ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಪುಲೆ ಅವರ 200ನೇ ಜನ್ಮ ದಿನ

ಜ್ಯೋತಿ ಬಾ ಪುಲೆ ಅವರ 200ನೇ ಜನ್ಮ ದಿನ ಅಂಗವಾಗಿ ಸಂಸತ್‌ ಆವರಣದ ಪ್ರೇರಣಾ ಸ್ಥಳದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ರಾಹುಲ್ ಗಾಂಧಿ, ಸ್ಪೀಕರ್‌ ಓಂ ಬಿರ್ಲಾ, ಕೇಂದ್ರ ಸಚಿವ ಜೆಪಿ ನಡ್ಡಾ ಸೇರಿ ಪ್ರಮುಖರು ಅದಾಗಲೇ ಉಪಸ್ಥಿತರಿದ್ದರು. ಆಗ ಮೋದಿ ಅವರು ಕೂಡ ಸಮಾರಂಭಕ್ಕೆ ಆಗಮಿಸಿದರು.

ಎಲ್ಲರಿಗೂ ನಮಸ್ಕರಿಸಿದ ಮೋದಿ

ಎಲ್ಲರಿಗೂ ನಮಸ್ಕರಿಸಿದ ಮೋದಿ, ರಾಹುಲ್‌ ಗಾಂಧಿಯವರನ್ನೂ ನೋಡಿ ನಗೆ ಬೀರಿದರು. ಅದಕ್ಕೆ ರಾಹುಲ್‌ ಕೂಡ ನಗುತ್ತಲೇ ಪ್ರತಿಕ್ರಿಯಿಸಿದರು. ಇಬ್ಬರೂ ಕೂಡ ಆತ್ಮೀಯತೆಯಿಂದಲೇ ಕೆಲ ಕಾಲ ಸಂಭಾಷಣೆ ನಡೆಸಿದರು.ರಾಜಕಾರಣದಲ್ಲಿ ಸದಾ ವೈರುಧ್ಯ ದಿಕ್ಕಿನಲ್ಲಿ ಸಾಗುತ್ತಿದ್ದವರು ಅಪರೂಪ ಎಂಬಂತೆ ಒಟ್ಟಿಗೆ ಸಂಭಾಷಣೆ ನಡೆಸಿರುವ ತುಣುಕುಗಳು ಜಾಲತಾಣದಲ್ಲಿ ವೈರಲ್‌ ಆಗಿದೆ.