ಒಡಿಶಾ ಅಸೆಂಬ್ಲಿಗೆ ಮೊದಲ ಮಹಿಳಾ ಮುಸ್ಲಿಂ ಶಾಸಕಿ!

| Published : Jun 09 2024, 01:34 AM IST / Updated: Jun 09 2024, 04:21 AM IST

ಒಡಿಶಾ ಅಸೆಂಬ್ಲಿಗೆ ಮೊದಲ ಮಹಿಳಾ ಮುಸ್ಲಿಂ ಶಾಸಕಿ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಐಐಎಂಬಿಯಲ್ಲಿ ಸೋಫಿಯಾ ವಿಧ್ಯಾಭ್ಯಾಸ ಮಾಡಿದ್ದು, ಈಗ ಒಡಿಶಾದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಿಯಾಗಿ ಚುನಾಯಿತರಾಗಿದ್ದಾರೆ.

ಭುವನೇಶ್ವರ: ಒಡಿಶಾದ ವಿಧಾಸನಭೆ ಚುನಾವಣೆಯಲ್ಲಿ ಬಾರಬತಿ ಕಟಕ್ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಸೋಫಿಯಾ ಫಿರ್ದೌಸ್‌ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಒಡಿಶಾದಲ್ಲಿ ವಿಧಾನಸಭೆಗೆ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ.

 ವಿಶೇಷ ಎಂದರೆ ಬೆಂಗಳೂರಿನ ಐಐಎಂಬಿಯಲ್ಲಿ ಸೋಫಿಯಾ ವಿಧ್ಯಾಭ್ಯಾಸ ಮಾಡಿದ್ದಾರೆ.8 ಸಾವಿರ ಮತದಿಂದ ಬಿಜೆಪಿಯ ಪೂರ್ಣ ಚಂದ್ರ ಮಹಾಪಾತ್ರರನ್ನು ಸೋಲಿಸಿರುವ ಸೋಫಿಯಾ ಫಿರ್ದೌಸ್‌ ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವರು.

 ಇವರ ತಂದೆ ಮೊಹಮ್ಮದ್ ಮೊಕ್ವಿಮ್ ಕಾಂಗ್ರೆಸ್‌ನ ಹಿರಿಯ ನಾಯಕ. 32 ವರ್ಷದ ಸೋಫಿಯಾ ಸಿವಿಲ್ ಇಂಜಿನಿಯರಿಂದ್ ಪದವೀಧರೆ. ಇವರಿಗೆ ಬೆಂಗಳೂರಿನ ನಂಟಿದ್ದು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಸಂಸ್ಥೆಯಲ್ಲಿ 2022ರಲ್ಲಿ ಎಕ್ಸಿಕ್ಯೂಟಿವ್ ಜನರಲ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ.