ಸಾರಾಂಶ
ಅಹ್ಮದ್ ಷರೀಫ್ ಚೌಧರಿ ಕುರಿತ ಕುತೂಹಲದ ಸುದ್ದಿಯೊಂದು ಹೊರಬಿದ್ದಿದೆ. ಚೌಧರಿ ಅವರು ಹತ ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಬಾ ಬಿನ್ ಲಾಡೆನ್‌ಗೆ ಆಪ್ತನಾಗಿದ್ದ ಅಧಿಕಾರಿಯೊಬ್ಬರ ಮಗ ಎಂದು ಗೊತ್ತಾಗಿದೆ.
ಇಸ್ಲಾಮಾಬಾದ್: ಭಾರತದ ವಿರುದ್ಧ ಪಾಕಿಸ್ತಾನದ ಅಘೋಷಿತ ಕದನ ಸಾಗಿರುವ ನಡುವೆಯೇ ಪಾಕಿಸ್ತಾನ ಸೇನಾ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಕುರಿತ ಕುತೂಹಲದ ಸುದ್ದಿಯೊಂದು ಹೊರಬಿದ್ದಿದೆ. ಚೌಧರಿ ಅವರು ಹತ ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಬಾ ಬಿನ್ ಲಾಡೆನ್‌ಗೆ ಆಪ್ತನಾಗಿದ್ದ ಅಧಿಕಾರಿಯೊಬ್ಬರ ಮಗ ಎಂದು ಗೊತ್ತಾಗಿದೆ.
ಚೌಧರಿ ಪಾಕಿಸ್ತಾನದ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಪುತ್ರರಾಗಿದ್ದಾರೆ. ಬಶೀರುದ್ದಿನ್ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಭೇಟಿ ಮಾಡಿ ಭಯೋತ್ಪಾದಕರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಹಸ್ತಾಂತರಿಸಲು ಪ್ರಯತ್ನಿಸಿದ್ದ ಆರೋಪ ಹೊತ್ತಿದ್ದರು. ಬಳಿಕ ಬಶೀರುದ್ದೀನ್ ಅವರನ್ನೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು.