ರಾಜ್ಯಸಭೆ ಸದಸ್ಯೆ ಆಗಿ ಸೋನಿಯಾ ಪ್ರಮಾಣ ವಚನ

| Published : Apr 05 2024, 01:10 AM IST / Updated: Apr 05 2024, 05:29 AM IST

ಸಾರಾಂಶ

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕಸಿದರು.

ನವದೆಹಲಿ: ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕಸಿದರು. ಸೋನಿಯಾ 25 ವರ್ಷ ಲೋಕಸಭೆ ಸದಸ್ಯೆ ಆಗಿದ್ದರು. ರಾಜ್ಯಸಭೆಗೆ ಅವರ ಪದಾರ್ಪಣೆ ಇದೇ ಮೊದಲು.

ಎಲ್ಲರಿಗೂ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಗುರುವಾರ ನೂತನ ಸದಸ್ಯರಿಗೆ ಗೌಪ್ಯತೆಯ ವಿಧಿ ಬೋಧಿಸಿದರು.

ಪ್ರಮಾಣ ಸ್ವೀಕರಿಸಿದವರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಅಜಯ್ ಮಾಕನ್ ಮತ್ತು ಸೈಯದ್ ನಾಸೀರ್ ಹುಸೇನ್ ಕೂಡ ಇದ್ದಾರೆ. ಉಳಿದಂತೆ ಆರ್‌.ಪಿ.ಎನ್. ಸಿಂಗ್, ಸಮಿಕ್ ಭಟ್ಟಾಚಾರ್ಯ, ಸಂಜಯ್‌ ಕುಮಾರ್‌ ಝಾ, ಸುಭಾಶಿಶ್‌ ಖುಂಟಿಯಾ, ದೇಬಾಶಿಶ್‌ ಸಮಂತರಾಯ್‌, ಮದನ್‌ ರಾಠೋಡ್‌, ಗೊಲ್ಲ ಬಾಬು ರಾವ್‌, ಮೇದಾ ರಘುನಾಥ ರೆಡ್ಡಿ, ಯರ್ರಂ ವೆಂಕಟ ಸುಬ್ಬಾ ರೆಡ್ಡಿ, ರವಿಚಂದ್ರ ವಡ್ಡಿರಾಜು ಕೂಡ ಪ್ರಮಾಣವಚನ ಸ್ವೀಕರಿಸರು.