ಅಕ್ರಮ ಸಂಬಂಧ ಬಯಲಾಗಿದ್ದಕ್ಕೆ ಕರೆಂಟ್‌ ಕಂಬ ಏರಿದಳು!

| Published : Apr 05 2024, 01:09 AM IST / Updated: Apr 05 2024, 05:32 AM IST

ಸಾರಾಂಶ

ಅಕ್ರಮ ಸಂಬಂಧ ಬಯಲಾಗಿದ್ದಕ್ಕೆ ಮಹಿಳೆಯೊಬ್ಬಳು ಕರೆಂಟ್‌ ಕಂಬ ಏರಿ ಹೈಡ್ರಾಮಾ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.

ಗೋರಖಪುರ: ಅಕ್ರಮ ಸಂಬಂಧ ಬಯಲಾಗಿದ್ದಕ್ಕೆ ಮಹಿಳೆಯೊಬ್ಬಳು ಕರೆಂಟ್‌ ಕಂಬ ಏರಿ ಹೈಡ್ರಾಮಾ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.

 ಇಲ್ಲಿನ 44 ವರ್ಷದ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಗಂಡ, ಮನೆ, ಮಕ್ಕಳು ಅಂತ ಇರುವುದು ಬಿಟ್ಟು, ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಒಂದಲ್ಲ, ಎರಡಲ್ಲ ಬರೋಬ್ಬರಿ 7 ವರ್ಷ ಈ ಸಂಬಂಧ ಮುಚ್ಚಿಟ್ಟಿದ್ದಳು. 

ಪತಿಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಮನೆ ರಣರಂಗವಾಗಿದೆ. ಸಾಲದಕ್ಕೆ ‘ಪ್ರಿಯಕರ ನನ್ನ ಮನೆಯಲ್ಲಿಯೇ ಇರಬೇಕು’ ಅನ್ನೋ ವಿಚಿತ್ರ ಡಿಮ್ಯಾಂಡ್‌ ಇಟ್ಟಿದ್ದಾಳೆ. ಇದಕ್ಕೆ ಆಕೆಯ ಪತಿ ಒಪ್ಪಲಿಲ್ಲ. ಆ ಬಳಿಕ ಹೈ ಡ್ರಾಮಾ ಮಾಡಿದ್ದಾಳೆ. ಮನೆಯಿಂದ ಹೊರ ಬಂದು ಕರೆಂಟ್‌ ಕಂಬವನ್ನ ಏರಿ ಬಿಟ್ಟಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ಆಕೆಯನ್ನು ಕೆಳಗಿಳಿಸಿದ್ದಾರೆ.