ಭ್ರಷ್ಟಾಚಾರ ಮುಚ್ಚಿಕೊಳ್ಳಲು ಆಪ್‌-ಕಾಂಗ್ರೆಸ್‌ ಏಕತೆ: ಮೋದಿ

| Published : Apr 05 2024, 01:08 AM IST / Updated: Apr 05 2024, 05:35 AM IST

ಸಾರಾಂಶ

‘ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿದ್ದ ಎರಡು ಪಕ್ಷಗಳು ಇಂದು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮೈತ್ರಿ ಮಾಡಿಕೊಂಡಿವೆ’ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಜಮೂಯಿ (ಬಿಹಾರ): ‘ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿದ್ದ ಎರಡು ಪಕ್ಷಗಳು ಇಂದು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮೈತ್ರಿ ಮಾಡಿಕೊಂಡಿವೆ’ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆಗೂಡಿ ತಮ್ಮ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದವರು ಇಂದು ನನ್ನನ್ನು ದೂಷಿಸುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಗೋದಿ ಪೂರೈಕೆಗೂ ಹೆಣಗಾಡುತ್ತಿದ್ದ ಸಣ್ಣ ಸಣ್ಣ ದೇಶದ ಭಯೋತ್ಪಾದಕರು ಭಾರತದ ದೇಶದ ಮೇಲೆ ದಾಳಿ ಮಾಡುತ್ತಿದ್ದರು, ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ’ ಎಂದು ಪಾಕ್‌ ಹೆಸರೆತ್ತದೇ ತಿವಿದರು,

ಆರ್‌ಜೆಡಿ - ಕಾಂಗ್ರೆಸ್‌ ಮೈತ್ರಿಕೂಟವು ಅಯೋಧ್ಯೆಯ ರಾಮಮಂದಿರಕ್ಕೆ ಅವಹೇಳನ ಮಾಡಿವೆ. ಜೊತೆಗೆ ದೇಶದ ಉನ್ನತ ಸ್ಥಾನವಾದ ರಾಷ್ಟಪತಿ ಸ್ಥಾನಕ್ಕೆ ಒಬ್ಬ ಬುಡಕಟ್ಟು ಜನಾಂಗ ಮಹಿಳೆಯ ಆಯ್ಕೆಯನ್ನು ಈ ಪಕ್ಷಗಳು ವಿರೋಧಿಸಿದ್ದವು ಎಂದು ಮೋದಿ ಆರೋಪಿಸಿದರು.

ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಬಿಹಾರದಲ್ಲಿ ಎಲ್ಲ 40 ಸ್ಥಾನಗಳನ್ನು ಗೆಲ್ಲುವ ಮೂಲಕ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಕರಿಸಬೇಕು ಎಂದು ಮತದಾರರಿಗೆ ಪ್ರಧಾನಿ ನೀಡಿದರು.