ಜನರ ತಲಾದಾಯ ₹2 ಲಕ್ಷದಿಂದ ₹3.7 ಲಕ್ಷಕ್ಕೇರಿಸಲು ಮೋದಿ ಗುರಿ

| Published : Apr 05 2024, 01:09 AM IST / Updated: Apr 05 2024, 05:43 AM IST

ಜನರ ತಲಾದಾಯ ₹2 ಲಕ್ಷದಿಂದ ₹3.7 ಲಕ್ಷಕ್ಕೇರಿಸಲು ಮೋದಿ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

Prime Minister Narendra Modi, who aims to make India the No. 3 economy, has prepared an ambitious plan of what level India's economy should reach in the next 6 years and how much the per capita income of the country's people should increase.  

ನವದೆಹಲಿ: ಭಾರತವನ್ನು ನಂ.3 ಆರ್ಥಿಕತೆ ಮಾಡಬೇಕು ಎಂಬ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು 6 ವರ್ಷದಲ್ಲಿ (ಈ ಚುನಾವಣೆಯಲ್ಲಿ ಗೆದ್ದರೆ ತಮ್ಮ 3ನೇ ಅವಧಿಯಲ್ಲಿ) ಭಾರತದ ಆರ್ಥಿಕತೆ ಯಾವ ಮಟ್ಟಕ್ಕೆ ತಲುಪಬೇಕು ಹಾಗೂ ದೇಶದ ಜನರ ತಲಾದಾಯ ಎಷ್ಟು ಹೆಚ್ಚಬೇಕು ಎಂಬ ಮಹತ್ವಾಕಾಂಕ್ಷಿ ಗುರಿಯ ಕಾರ್ಯಸೂಚಿಯನ್ನು ಈಗಲೇ ಸಿದ್ಧಪಡಿಸಿಟ್ಟುಕೊಂಡಿದ್ದಾರೆ ಎಂಬುದು ಸರ್ಕಾರಿ ದಾಖಲೆಗಳಿಂದ ಬಹಿರಂಗವಾಗಿದೆ.

ಭಾರತದ ನಾಗರಿಕರ ತಲಾದಾಯ ಈಗ ಸರಾಸರಿ (ವರ್ಷಕ್ಕೆ) 2 ಲಕ್ಷ ರು. ಇದೆ. ಅದನ್ನು ಇನ್ನು 6 ವರ್ಷದಲ್ಲಿ ಅಂದರೆ 2030ರ ವೇಳೆಗೆ 3.7 ಲಕ್ಷ ರು.ಗೆ ಏರುಸುವ ಗುರಿಯನ್ನು ಮೋದಿ ಹೊಂದಿದ್ದಾರೆ. ಇನ್ನು ಭಾರತದ ಆರ್ಥಿಕತೆ 2030ರ ವೇಳೆಗೆ 6.69 ಲಕ್ಷ ಕೋಟಿ ಡಾಲರ್‌ ಆಗಬೇಕು ಎಂಬ ಮಹತ್ವಾಕಾಂಕ್ಷೆಯನ್ನೂ ಮೋದಿ ಹೊಂದಿದ್ದಾರೆ. 

ಸದ್ಯ ಭಾರತದ ಆರ್ಥಿಕತೆ 3.51 ಲಕ್ಷ ಕೋಟಿ ಡಾಲರ್ ಇದೆ ಎಂದು ಸರ್ಕಾರಿ ದಾಖಲೆಗಳಲ್ಲಿ ಸರ್ಕಾರದ ಮಹದೋದ್ದೇಶಗಳನ್ನು ವಿವರಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಈ ಹಿಂದೆ 2ನೇ ಸಲ ಅಧಿಕಾರಕ್ಕೆ ಬಂದಾಗ, ಇದೇ ವಿತ್ತೀಯ ವರ್ಷದಲ್ಲಿ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯ ಉದ್ದೇಶವನ್ನು ಮೋದಿ ಹೊಂದಿದ್ದರು. ಆದರೆ ಕೋವಿಡ್‌ ಕಾರಣ ಅದು ವಿಳಂಬ ಆಗಿತ್ತು. ಹೀಗಾಗಿ 3ನೇ ಸಲ ಅಧಿಕಾರಕ್ಕೆ ಬಂದರೆ ಅಂದಿದ್ದನ್ನು ಸಾಧಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ವರದಿ ಹೇಳಿದೆ. ಭಾರತ ಸದ್ಯ ವಿಶ್ವ ಆರ್ಥಿಕತೆಯಲ್ಲಿ 5ನೇ ಸ್ಥಾನ ಹೊದಿದೆ.