ಪ್ರಯಾಣಿಕರ ರೈಲುಗಳ ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಅದರನ್ವಯ, 215 ಕಿ.ಮೀಗಿಂತ ದೂರದ ಸಾಮಾನ್ಯ ರೈಲುಗಳ ಟಿಕೆಟ್‌ ದರ ಪ್ರತಿ ಕಿ.ಮೀಗೆ 1 ಪೈಸೆ ಹೆಚ್ಚಳವಾಗಲಿದೆ. ಜೊತೆಗೆ ಎ.ಸಿ ಮತ್ತು ಎ.ಸಿ ಸೌಲಭ್ಯ ಇಲ್ಲದ ಮೇಲ್‌, ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ದರ ಏರಿಕೆ ಪ್ರತಿ ಕಿ.ಮೀಗೆ 2 ಪೈಸೆ ಇರಲಿದೆ.

ದೂರದ ಪ್ರಯಾಣಕ್ಕೆ ಕಿ.ಮೀಗೆ 1ರಿಂದ 2 ಪೈಸೆ ಹೆಚ್ಚಳ

215 ಕಿ.ಮೀಗಿಂತ ಹೆಚ್ಚಿನ ದೂರದ ಸಂಚಾರಕ್ಕೆ ಅನ್ವಯ

ನವದೆಹಲಿ: ಪ್ರಯಾಣಿಕರ ರೈಲುಗಳ ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಅದರನ್ವಯ, 215 ಕಿ.ಮೀಗಿಂತ ದೂರದ ಸಾಮಾನ್ಯ ರೈಲುಗಳ ಟಿಕೆಟ್‌ ದರ ಪ್ರತಿ ಕಿ.ಮೀಗೆ 1 ಪೈಸೆ ಹೆಚ್ಚಳವಾಗಲಿದೆ. ಜೊತೆಗೆ ಎ.ಸಿ ಮತ್ತು ಎ.ಸಿ ಸೌಲಭ್ಯ ಇಲ್ಲದ ಮೇಲ್‌, ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ದರ ಏರಿಕೆ ಪ್ರತಿ ಕಿ.ಮೀಗೆ 2 ಪೈಸೆ ಇರಲಿದೆ.

ಆದರೆ ನಗರ ರೈಲುಗಳ ಮಾಸಿಕ ಪಾಸ್‌ ಮತ್ತು 215 ಕಿ.ಮೀ ಒಳಗಿನ ರೈಲುಗಳಲ್ಲಿ ಟಿಕೆಟ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಮಾಹಿತಿ ನೀಡಿದೆ. ಹೊಸ ದರ 2025ರ ಡಿ.26ರಿಂದ ಜಾರಿಗೆ ಬರಲಿದೆ. ಈ ಹೆಚ್ಚಳದಿಂದ 2026 ಮಾ.31ರೊಳಗೆ 600 ಕೋಟಿ ರು. ಆದಾಯ ಸಂಗ್ರಹದ ನಿರೀಕ್ಷೆಯನ್ನು ರೈಲ್ವೆ ಹೊಂದಿದೆ.

ಈ ಹಿಂದೆ 2025ರ ಜುಲೈನಲ್ಲೂ ಇದೇ ರೀತಿ ರೈಲ್ವೆ ಅಲ್ಪ ಪ್ರಮಾಣದಲ್ಲಿ ದರ ಏರಿಕೆ ಮಾಡಿತ್ತು. ಅದರಿಂದ ಈವರೆಗೆ ಹೆಚ್ಚುವರಿ 700 ಕೋಟಿ ರು. ಆದಾಯ ಸಂಗ್ರಹವಾಗಿತ್ತು ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

ಇದೀಗ ರೈಲ್ವೆ ಇಲಾಖೆಯ ಟಿಕೆಟ್‌ ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯೇನೂ ಆಗುವುದಿಲ್ಲ. 500 ಕಿ.ಮೀ. ನಾನ್‌ ಎ.ಸಿ ವಿಭಾಗದ ಟಿಕೆಟ್‌ ದರ 10 ರು.ನಷ್ಟು ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.