ಸಾರಾಂಶ
ತಿರುಪತಿಯಲ್ಲಿ ಕಾಲ್ತುಳಿತ ದುರಂತದ ನಡುವೆಯೇ ವೈಕುಂಠ ಏಕಾದಶಿ ಸಂಭ್ರಮ ಜೋರಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ಶುಕ್ರವಾರ ವೆಂಕಟೇಶ್ವರನ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ತಿರುಪತಿ: ತಿರುಪತಿಯಲ್ಲಿ ಕಾಲ್ತುಳಿತ ದುರಂತದ ನಡುವೆಯೇ ವೈಕುಂಠ ಏಕಾದಶಿ ಸಂಭ್ರಮ ಜೋರಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ಶುಕ್ರವಾರ ವೆಂಕಟೇಶ್ವರನ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
52 ಗಾಯಾಳುಗಳಿಗೆ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ವಿಶೇಷ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ (ಟಿಟಿಡಿ) ವಿಶೇಷ ವೈಕುಂಠ ದ್ವಾರ ಪ್ರವೇಶದ ವ್ಯವಸ್ಥೆ ಮಾಡಿತ್ತು.ದರ್ಶನದ ಬಳಿಕ ಅವರಿಗೆ ವಾಹನ ವ್ಯವಸ್ಥೆ ಮಾಡಿ ಅವರ ಸ್ವಂತ ಊರುಗಳಿಗೆ ಕಳಿಸಿಕೊಡಲಾಯಿತು.ಗಾಯಗೊಂಡ ಭಕ್ತರು ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಿದ ಟಿಟಿಡಿ, ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.