ನಿರುದ್ಯೋಗ ಪ್ರಮಾಣ ಶೇ.3.1ಕ್ಕಿಳಿಕೆ

| Published : Mar 06 2024, 02:18 AM IST

ಸಾರಾಂಶ

ನಿರುದ್ಯೋಗ ಪ್ರಮಾಣ 2023ರಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದದ್ದಾಗಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ನವದೆಹಲಿ: 2023ರಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.3.1ಕ್ಕೆ ಇಳಿದಿತ್ತು. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಎಂದು ಕೇಂದ್ರ ಸಾಂಖಿಕ ಇಲಾಖೆ ವ್ಯಾಪ್ತಿಯಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

2021ರಲ್ಲಿ 15 ವರ್ಷ ಮೇಲ್ಪಟ್ಟವರಲ್ಲಿನ ನಿರುದ್ಯೋಗ ಪ್ರಮಾಣ ಶೇ.4.2ರಷ್ಟಿತ್ತು, 2022ರಲ್ಲಿ ಅದು ಶೇ.3.6ಕ್ಕೆ ಕುಸಿದು, 2023ರಲ್ಲಿ ಶೇ.3.1ಕ್ಕೆ ಇಳಿಕೆ ಕಂಡಿದೆ ಎಂದು ವರದಿ ಹೇಳಿದೆ. ಕೋವಿಡ್‌ ಸಮಯದಲ್ಲಿ ದೇಶಾದ್ಯಂತ ಜಾರಿಗೊಳಿಸಲಾದ ಲಾಕ್ಡೌನ್‌ ಭಾರೀ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾಗಿತ್ತು. ಆದರೆ ಸಾಂಕ್ರಾಮಿಕದ ಬಳಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಣೆಯಾಗಿದೆ ಎಂದು ವರದಿ ಹೇಳಿದೆ.