ಸಾರಾಂಶ
ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡದಂತೆ ತಡೆದ ಮೂವರು ಮಹಿಳಾ ಭದ್ರತಾ ಸಿಬ್ಬಂದಿಯನ್ನುಇಬ್ಬರು ಮಹಿಳೆಯರು ಥಳಿಸಿದ ಘಟನೆ ಶನಿವಾರ ನಡೆದಿದೆ
ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡದಂತೆ ತಡೆದ ಮೂವರು ಮಹಿಳಾ ಭದ್ರತಾ ಸಿಬ್ಬಂದಿಯನ್ನುಇಬ್ಬರು ಮಹಿಳೆಯರು ಥಳಿಸಿದ ಘಟನೆ ಶನಿವಾರ ನಡೆದಿದೆ.
ದೇವಾಲಯದ ಆವರಣದಲ್ಲಿರುವ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸುವುದನ್ನು ತಡೆದಿದಕ್ಕೆ ನಗ್ಡಾ ಪಟ್ಟಣದ ನಿವಾಸಿಗಳಾದ ಪಲಕ್ ಮತ್ತು ಪರಿ ಎಂಬ ಇಬ್ಬರು ಮಹಿಳೆಯರು, ಕೆಲವು ವ್ಯಕ್ತಿಗಳು ಸೇರಿ ಮೂವರು ಮಹಿಳಾ ಗಾರ್ಡ್‌ಗಳನ್ನು ಥಳಿಸಿದ್ದಾರೆ.
ಗಾರ್ಡ್‌ಗಳಾದ ಶಿವಾನಿ ಪುಷ್ಪದ್, ಸಂಧ್ಯಾ ಪ್ರಜಾಪತಿ, ಸಂಗೀತಾ ಚೇಂಜೇಶಿಯಾ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ