ತಮ್ಮತ್ತ ಬೊಗಳಿದ್ದಕ್ಕೆ ಬೀದಿ ನಾಯಿಗಳ ಕಾಲು ಮುರಿದ 3 ಪಾಪಿಗಳು

| Published : Feb 05 2024, 01:50 AM IST / Updated: Feb 05 2024, 07:34 AM IST

ಸಾರಾಂಶ

ನಾಯಿ ಬೊಗಳಿದ ಕಾರಣಕ್ಕೆ ಅದನ್ನು ಮೂವರು ಥಳಿಸಿದ್ದಾರೆ.

ಲಖನೌ: ತಮ್ಮತ್ತ ಬೊಗಳಿದವು ಎಂಬ ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕರು ಎರಡು ಬೀದಿ ನಾಯಿಗಳಿಗೆ ದೊಣ್ಣೆಯಿಂದ ಮನಬಂದಂತೆ ಹೊಡೆದು ಒಂದು ನಾಯಿಯ ಕಾಲು ಮುರಿದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಖನೌದ ಸಾದತ್‌ಜಂಗ್‌ ಪ್ರದೇಶದಲ್ಲಿ ನಡೆದಿದೆ.

ಯುವಕರು ದೊಣ್ಣೆ ಹಿಡಿದು ನಾಯಿಗಳಿಗೆ ಮನಸೋಇಚ್ಛೆ ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘಟನೆ ಕುರಿತು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.