ಸಾರಾಂಶ
ಆಸ್ಥಾ ಪೂನಿಯಾ, ನೌಕಾ ಯುದ್ಧ ವಿಮಾನದ ಮೊಟ್ಟ ಮೊದಲ ಮಹಿಳಾ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ನೌಕಾಪಡೆಯ ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ.
ನವದೆಹಲಿ: ಆಸ್ಥಾ ಪೂನಿಯಾ, ನೌಕಾ ಯುದ್ಧವಿಮಾನದ ಮೊಟ್ಟ ಮೊದಲ ಮಹಿಳಾ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ನೌಕಾಪಡೆಯ ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ.
ಭಾರತೀಯ ನೌಕಾಪಡೆಯು ಶುಕ್ರವಾರ ವಿಶಾಖಪಟ್ಟಣಂನ ಐಎನ್‌ಎಸ್ ದೇಗಾದಲ್ಲಿ 2ನೇ ಮೂಲ ಹಾಕ್ ಕನ್ವರ್ಷನ್ ಕೋರ್ಸ್‌ನ ಘಟಿಕೋತ್ಸವವನ್ನು ಆಚರಿಸಿತು. ಈ ವೇಳೆ ಆಸ್ಥಾ ಪೂನಿಯಾ, ಲೆ. ಅತುಲ್ ಕುಮಾರ್ ಧುಲ್ ಅವರೊಡನೆ ಪ್ರತಿಷ್ಠಿತ ‘ವಿಂಗ್ಸ್ ಆಫ್ ಗೋಲ್ಡ್’ ಪಡೆದು, ನೌಕಾ ಯುದ್ಧವಿಮಾನ ಹಾರಾಟದ ಅರ್ಹತೆ ಪಡೆದರು.
‘ಭಾರತೀಯ ನೌಕಾಪಡೆಯು ಈಗಾಗಲೇ ಎಂಆರ್ ವಿಮಾನ ಮತ್ತು ಹೆಲಿಕಾಪ್ಟರ್‌ಗಳಲ್ಲಿ ಮಹಿಳೆಯರನ್ನು ಪೈಲಟ್‌ಗಳು ಮತ್ತು ನೌಕಾ ವಾಯುಕಾರ್ಯಾಚರಣೆ ಅಧಿಕಾರಿಗಳಾಗಿ ನೇಮಿಸಿಕೊಂಡಿದೆ. ಆದರೆ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಆಗಿ ಆಸ್ಥಾ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಯುದ್ಧ ವಿಮಾನಗಳ ಕುರಿತು ಆಸ್ಥಾ ವಿಶೇಷ ತರಬೇತಿ ಪಡೆಯಲಿದ್ದಾರೆ.