ಸಾರಾಂಶ
ಒಡಿಶಾದಲ್ಲಿ ಅಪಸ್ಮಾರದಿಂದ ಮೃತಪಟ್ಟ 2ನೇ ತರಗತಿ ಬಾಲಕನ ಅಂಗಾಂಗ ದಾನಗಳನ್ನು ಪೋಷಕರು ದಾನ ಮಾಡಿದ ಹಿನ್ನೆಲೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಭುವನೇಶ್ವರ: ತನ್ನ ಸಾವಿನ ಬಳಿಕ ಅಂಗಾಂಗ ದಾನ ಮಾಡಿದ 2ನೇ ತರಗತಿ ಬಾಲಕನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಿದ ಮನಮಿಡಿಯುವ ಘಟನೆ ಒಡಿಶಾದಲ್ಲಿ ನಡೆದಿದೆ.
ಸುಭಜಿತ್ ಸಾಹು ಎಂಬ ಎರಡನೇ ತರಗತಿಯ ಬಾಲಕ ಕಳೆದ ಬುಧವಾರ ತನ್ನ ಶಾಲಾ ಪರೀಕ್ಷೆಯನ್ನು ಬರೆಯುವಾಗ ಮೆದುಳಿನಲ್ಲಿ ಅಪಸ್ಮಾರ ಉಂಟಾಗಿ ಮೃತಪಟ್ಟಿದ್ದ.ಈ ಹಿನ್ನೆಲೆಯಲ್ಲಿ ಆತನ ಪೋಷಕರು ಸುಭಜಿತ್‌ನ ಯಕೃತ್ತು, ಶ್ವಾಸಕೋಶ, ಕಣ್ಣು, ಹೃದಯ, ಕರುಳು ಮುಂತಾದ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದರು.
ಒಡಿಶಾ ಸರ್ಕಾರವು ಅಂಗಾಂಗ ದಾನ ಮಾಡಿದ ವ್ಯಕ್ತಿಗಳನ್ನು ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಪ್ರಕಟಿಸಿತ್ತು.