ಸಾರಾಂಶ
ಅಮೆರಿಕದ ಕಾರ್ಯಕ್ಷಮತೆ ವಿಭಾಗ(ಡಾಜ್)ದ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್, ಪ್ರತೀ ವಾರ ತಮ್ಮ ಕೆಲಸದ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ನೌಕರರಿಗೆ ಆದೇಶಿಸಿದ್ದಾರೆ. ಅಂತೆ ಮಾಡದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಕಾರ್ಯಕ್ಷಮತೆ ವಿಭಾಗ(ಡಾಜ್)ದ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್, ಪ್ರತೀ ವಾರ ತಮ್ಮ ಕೆಲಸದ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ನೌಕರರಿಗೆ ಆದೇಶಿಸಿದ್ದಾರೆ. ಅಂತೆ ಮಾಡದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.
ಸರ್ಕಾರಿ ಕೆಲಸಗಾರರನ್ನು ಕಡಿಮೆಗೊಳಿಸಿ ಮತ್ತು ಮರುರೂಪಿಸುವ ಕಾರ್ಯವನ್ನು ಡಾಜ್ ಭರದಿಂದ ಮಾಡಬೇಕು ಎಂದು ಅದ್ಯಕ್ಷ ಟ್ರಂಪ್ ಟ್ರುತ್‌ನಲ್ಲಿ ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ.ಭದ್ರತೆ ಮತ್ತು ವಿನಿಮಯ ಆಯೋಗ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ, ತಾವು ಒಂದು ವಾರದಲ್ಲಿ ಮಾಡಿದ ಕೆಲಸದ ಸಾರಾಂಶವನ್ನು 5 ವಾಕ್ಯಗಳಲ್ಲಿ ತಿಳಿಸಲು ಸೂಚಿಸಲಾಗಿದೆ.
ಪರಾಗ್‌ಗೂ ಹೀಗೇ ಮಾಡಿದ್ದರು;3 ವರ್ಷಗಳ ಹಿಂದೆ ಟ್ವೀಟರ್‌ನ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗರ್ವಾಲ್ ಅವರ ಬಳಿಯೂ ಕೆಲಸ ವರದಿ ಕೇಳಲಾಗಿತ್ತು ಹಾಗೂ ಅವರು ಅದನ್ನು ಕೊಡದ ಕಾರಣ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.