ಸಾರಾಂಶ
ಹರ್ಯಾಣದಲ್ಲಿ ಸುಂದರ್ ಮಲಿಕ್ ಎಂಬ ಮದ್ಯೋದ್ಯಮಿಗಳು 35 ಬಾರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಝಜ್ಜರ್ (ಹರ್ಯಾಣ): ಉದ್ಯಮಿಯೊಬ್ಬರು ಡಾಬಾ ಸಮೀಪ ತಮ್ಮ ಕಾರಿನಲ್ಲಿ ಮಲಗಿರುವಾಗ ಅನಾಮಧೇಯ ವ್ಯಕ್ತಿಗಳು 35 ಬಾರಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹರ್ಯಾಣದ ಝಜ್ಜರ್‌ನ ಮುರ್ತಲ್ ಸಮೀಪ ನಡೆದಿದೆ.
ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಸುಂದರ್ ಮಲಿಕ್ (38) ಎಂಬ ಮದ್ಯೋದ್ಯಮಿಯೊಬ್ಬರು ಡಾಬಾ ಸಮೀಪ ತಮ್ಮ ಎಸ್‌ಯುವಿ ಕಾರಿನಲ್ಲಿ ಮಲಗಿದ್ದರು. ಈ ವೇಳೆ ಬಂದ ಇಬ್ಬರು ಬಂದೂಕುಧಾರಿಗಳು, ಏಕಾಏಕಿ ಸುಂದರ್ ಅವರನ್ನು ಹೊರಗೆಳೆದಿದ್ದಾರೆ.
ಬಳಿಕ ಸುಂದರ್ ಕುಸಿದು ಬೀಳುವ ತನಕ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ. ಡಾಬಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಘಟನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫೆ.26ರಂದು ನಾಫೆ ಸಿಂಗ್ ರಾಟಿ ಎಂಬ ಐಎನ್‌ಎಲ್ ಡಿ ಪಕ್ಷದ ಅಧ್ಯಕ್ಷರನ್ನು ಅನಾಮಧೇಯ ವ್ಯಕ್ತಿಗಳು ಝಜ್ಜರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.