30 ವಾರಗಳ ತುಂಬು ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ

| Published : Apr 23 2024, 12:51 AM IST / Updated: Apr 23 2024, 06:11 AM IST

30 ವಾರಗಳ ತುಂಬು ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

30 ತಿಂಗಳ ಗರ್ಭಿಣಿಯಾಗಿರುವ 14 ವರ್ಷಗಳ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ.

ನವದೆಹಲಿ: 30 ತಿಂಗಳ ಗರ್ಭಿಣಿಯಾಗಿರುವ 14 ವರ್ಷಗಳ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ.

ಪ್ರಸ್ತುತ ಇರುವ ಗರ್ಭಪಾತ ಕಾಯ್ದೆಯ ಪ್ರಕಾರ ಯಾವುದೇ ಸಂದರ್ಭದಲ್ಲಾದರೂ 24 ವಾರಗಳ ಗರ್ಭಾವಸ್ಥೆ ಮೀರಿದ್ದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲು ಬರುವುದಿಲ್ಲ. ಆದರೆ ಬಾಲಕಿ ಗರ್ಭಪಾತ ಮಾಡಿಸಿಕೊಳ್ಳಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥಳಿದ್ದಾಳೆ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ ಗರ್ಭಪಾತಕ್ಕೆ ಅವಕಾಶ ನೀಡಿದೆ.

ಏನಿದು ಪ್ರಕರಣ?

ಮಹಾರಾಷ್ಟ್ರ ಮೂಲದ ಮಹಿಳೆ ತನ್ನ ಮಗಳು ಫೆಬ್ರವರಿ 2023ರಲ್ಲಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ಮೂರು ತಿಂಗಳ ಬಳಿಕ ಅವರ ಮಗಳು ರಾಜಸ್ಥಾನದಲ್ಲಿ ಗರ್ಭಿಣಿಯಾಗಿ ಪತ್ತೆಯಾಗಿದ್ದಳು. ನಂತರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ಮಹಿಳೆಯ ಗರ್ಭಾವಸ್ಥೆ 24 ವಾರಗಳು ದಾಟಿದ್ದರಿಂದ ಆಕೆಯ ಗರ್ಭಪಾತಕ್ಕೆ ಅವಕಾಶ ನೀಡಲು ಏ.4ರಂದು ಬಾಂಬೆ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯ ತಾಯಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪೇನು?

ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದ್ದು, ವೈದ್ಯಕೀಯ ವರದಿಯ ಪ್ರಕಾರ ಯುವತಿಯ ಇಚ್ಛೆಗೆ ವಿರುದ್ಧ ಗರ್ಭಧಾರಣೆ ಮುಂದುವರೆಸುವುದು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಿ 142ರ ವಿಶೇಷ ಅಧಿಕಾರವನ್ನು ಬಳಸಿ ಆಕೆಯ ಗರ್ಭಪಾತಕ್ಕೆ ಮುಂಬೈನ ಸಿಯಾನ್‌ನಲ್ಲಿರುವ ಲೋಕಮಾನ್ಯ ತಿಲಕ್‌ ವೈದ್ಯಕೀಯ ಅಸ್ಪತ್ರೆಗೆ ನಿರ್ದೇಶಿಸಲಾಗಿದೆ.

ವೈದ್ಯ ವರದಿ ಏನು?ಅತ್ಯಾಚಾರ ಸಂತ್ರಸ್ತ ಅಪ್ರಾಪ್ತ ಬಾಲಕಿ ಗರ್ಭಪಾತ ಮಾಡಿಸಿಕೊಳ್ಳುವಷ್ಟು ಮಾನಸಿಕ ಮತ್ತು ದೈಹಿಕ ಸಮರ್ಥಳಿದ್ದಾಳೆ. ಆಕೆಗೆ ಪ್ರಸ್ತುತ ಸನ್ನಿವೇಶದಲ್ಲಿ ಗರ್ಭಪಾತಕ್ಕಿಂತ ಹೆರಿಗೆ ಮಾಡುವುದು ಹೆಚ್ಚು ಅಪಾಯಕಾರಿಯಾಗಿದೆ.

==

ವಿಶೇಷ ಪ್ರಕರಣ ಏಕೆ?

-ಸಂತ್ರಸ್ತೆ 14ರ ಅಪ್ರಾಪ್ತೆ

-ಅತ್ಯಾಚಾರ ಸಂತ್ರಸ್ತೆ

-ತಡವಾಗಿ ಗರ್ಭಧಾರಣೆ ಅರಿಕೆ