ಸಲಿಂಗ ವಿವಾಹ: ಜು.10ಕ್ಕೆ ಮರುಪರಿಶೀಲನಾ ಅರ್ಜಿ ವಿಚಾರಣೆ

| Published : Jul 06 2024, 12:54 AM IST / Updated: Jul 06 2024, 06:40 AM IST

ಸಾರಾಂಶ

ಸಲಿಂಗ ವಿವಾಹ ಕಾನೂನು ಬದ್ಧವಲ್ಲವೆಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಜುಲೈ 10ಕ್ಕೆ ನಡೆಯಲಿದೆ.

ನವದೆಹಲಿ: ಸಲಿಂಗ ವಿವಾಹ ಕಾನೂನು ಬದ್ಧವಲ್ಲವೆಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಜುಲೈ 10ಕ್ಕೆ ನಡೆಯಲಿದೆ.

ಕಳೆದ ವರ್ಷ ಅಕ್ಟೋಬರ್‌ 17 ರಂದು ಸುಪ್ರೀಂ ಕೋರ್ಟ್, ಸಲಿಂಗ ವಿವಾಹ ಕಾನೂನು ಬದ್ಧಗೊಳಿಸಲು ಸಾಧ್ಯವಿಲ್ಲವೆಂದು ತೀರ್ಪು ಪ್ರಕಟಿಸಿತ್ತು. ಈ ಬಗ್ಗೆ ಮರುಪರೀಶಿಲಿಸುವಂತೆ ನ್ಯಾಯಾಲಯಕ್ಕೆಅರ್ಜಿ ಸಲ್ಲಿಕೆಯಾದ ಕಾರಣ ಮುಖ್ಯ ನ್ಯಾ। ಡಿ.ವೈ ಚಂದ್ರಚೂಡ್‌ , ನ್ಯಾ। ಸಂಜೀವ್‌ ಖನ್ನಾ, ಹಿಮಾ ಕೋಹ್ಲಿ, ಬಿ.ವಿ ನಾಗರತ್ನ, ಪಿ.ಎಸ್‌ ನರಸಿಂಹ ಸೇರರಿದಂತೆ ಒಟ್ಟು 5 ನ್ಯಾಯಾಧೀಶರ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ.

ಮರುಪರಿಶೀಲನಾ ಅರ್ಜಿ ಆಗಿರುವ ಕಾರಣ ಇದರ ವಿಚಾರಣೆಯು ಕೋರ್ಟ್‌ ಹಾಲ್‌ನಲ್ಲಿ ಬಹಿರಂಗವಾಗಿ ನಡೆಯುವುದಿಲ್ಲ. ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆಯಲಿದೆ.