ಸಾರಾಂಶ
ಚುನಾವಣಾ ಬಾಂಡ್ ಒಂದು ಹಗರಣವಾಗಿದ್ದು, ಸಂಸ್ಥೆಗಳು/ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ಕೊಡುಕೊಳ್ಳುವ ವ್ಯವಹಾರ ನಡೆದಿದೆ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ವಿಚಾರಣೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನವದೆಹಲಿ: ಚುನಾವಣಾ ಬಾಂಡ್ ಒಂದು ಹಗರಣವಾಗಿದ್ದು, ಸಂಸ್ಥೆಗಳು/ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ಕೊಡುಕೊಳ್ಳುವ ವ್ಯವಹಾರ ನಡೆದಿದೆ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ವಿಚಾರಣೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳ ಪರವಾಗಿ ಕಂಪನಿಗಳು ಖರೀದಿಸಿದ್ದಕ್ಕೆ ಬದಲಾಗಿ ಸಂಬಂಧಪಟ್ಟ ರಾಜಕೀಯ ಪಕ್ಷಗಳು ಅವುಗಳಿಗೆ ಮತ್ತೊಂದು ರೀತಿಯಲ್ಲಿ ಸಹಾಯವನ್ನು ಮಾಡಿವೆ(ಕ್ವಿಡ್ ಪ್ರೊ ಕೋ). ನಕಲಿ ಕಂಪನಿಗಳು ಮತ್ತು ನಷ್ಟದಲ್ಲಿದ್ದ ಕಂಪನಿಗಳೂ ಖರೀದಿಸಿರುವ ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸುವ ಜೊತೆಗೆ ನಷ್ಟದಲ್ಲಿರುವ ಮತ್ತು ನಕಲಿ ಕಂಪನಿಗಳಿಗೆ ದೇಣಿಗೆ ನೀಡಲು ಲಭ್ಯವಾದ ಆದಾಯ ಮೂಲದ ಕುರಿತು ತನಿಖೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.
ಚುನಾವಣಾ ಬಾಂಡ್ ದೇಣಿಗೆಯನ್ನು ಸುಪ್ರೀಂ ಕೋರ್ಟ್ ಫೆ.15ರಂದು ಅಮಾನ್ಯಗೊಳಿಸಿ ಮಾಹಿತಿ ಬಹಿರಂಗಗೊಳಿಸಲು ಆದೇಶಿಸಿತ್ತು. ಆ ಪ್ರಕಾರ ಬಾಂಡ್ ಮಾರುತ್ತಿದ್ದ ಎಸ್‌ಬಿಐ, ಎಲ್ಲ ವಿವರಗಳನ್ನು ಬಹಿರಂಗಪಡಿಸಿತ್ತು.