ಅಮರೀಂದರ್ ಪತ್ನಿ, ಕಾಂಗ್ರೆಸ್‌ ಸಂಸದೆ ಪ್ರಿನೀತ್‌ ಕೌರ್‌ ಬಿಜೆಪಿ ಸೇರ್ಪಡೆ

| Published : Mar 15 2024, 01:17 AM IST

ಅಮರೀಂದರ್ ಪತ್ನಿ, ಕಾಂಗ್ರೆಸ್‌ ಸಂಸದೆ ಪ್ರಿನೀತ್‌ ಕೌರ್‌ ಬಿಜೆಪಿ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಂಡಿದ್ದ ಲೋಕಸಭೆ ಸಂಸದೆ ಪ್ರಿನೀತ್‌ ಕೌರ್‌ ಗುರುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಂಡಿದ್ದ ಲೋಕಸಭೆ ಸಂಸದೆ ಪ್ರಿನೀತ್‌ ಕೌರ್‌ ಗುರುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇವರ ಪತಿಯಾದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು ಈ ಹಿಂದೆಯೇ ಬಿಜೆಪಿ ಸೇರಿದ್ದರು. ಗುರುವಾರ ಬಿಜೆಪಿ ಮುಖ್ಯಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಕೌರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇವರು ಕಾಂಗ್ರೆಸ್‌ ಪಕ್ಷದಿಂದ 4 ಬಾರಿ ಸಂಸದರಾಗಿ ಹಾಗೂ ಕೇಂದ್ರ ಮಂತ್ರಿಯೂ ಆಗಿದ್ದರು. ಪ್ರಸ್ತುತ ಇವರು ಪಟಿಯಾಲ ಲೋಕಸಭೆ ಕ್ಷೇತ್ರದಿಂದ ಸಂಸದೆಯಾಗಿದ್ದಾರೆ,