ಯೂಟ್ಯೂಬರ್‌ ರಣವೀರ್‌ ಆಲಹಾಬಾದಿಯಾ ಬಳಿಕ ಮಹಿಳಾ ಹಾಸ್ಯ ಕಲಾವಿದೆಯೊಬ್ಬಳು ತಂದೆ-ತಾಯಿ ಬಗ್ಗೆ ಕೀಳು ಜೋಕ್‌ ಮಾಡಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ಅವರ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ: ಯೂಟ್ಯೂಬರ್‌ ರಣವೀರ್‌ ಆಲಹಾಬಾದಿಯಾ ಬಳಿಕ ಮಹಿಳಾ ಹಾಸ್ಯ ಕಲಾವಿದೆಯೊಬ್ಬಳು ತಂದೆ-ತಾಯಿ ಬಗ್ಗೆ ಕೀಳು ಜೋಕ್‌ ಮಾಡಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ಅವರ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬ್‌ ಶೋ ಒಂದರಲ್ಲಿ ಮಾತನಾಡಿದ ವಿದೂಷಕಿ ಸ್ವಾತಿ ಸಚ್‌ದೇವ, ‘ನನ್ನ ತಾಯಿ ಇತ್ತೀಚೆಗೆ ನನ್ನ ಹತ್ತಿರ ಏಕಾಏಕಿ ಬಂದು ಸ್ನೇಹಿತೆಯ ಥರ ಮಾತನಾಡಲು ಆರಂಭಿಸಿದರು. ಏಕೆಂದರೆ ನನ್ನ ವೈಬ್ರೇಟರ್ (ಲೈಂಗಿಕ ಸುಖಕ್ಕಾಗಿ ಸ್ತ್ರೀಯರು ಬಳಸುವ ಸಾಧನ) ಆಕೆಗೆ ಸಿಕ್ಕಿತ್ತು.

 ಆಗ ನನಗೆ ಭಯವಾಯಿತು. ವೈಬ್ರೇಟರನ್ನು ಹಿಡಿದು ಇದೇನು ಆಟಿಕೆಯೇ, ಗ್ಯಾಜೆಟ್ಟೇ ಎಂದು ಕೇಳಿದಳು. ಇದಕ್ಕೆ ನಾನು ಉತ್ತರಿಸಿ ನಾನು, ‘ನಾನು ಪ್ರಮಾಣ ಮಾಡುತ್ತೇನೆ. ಅದು ಅಪ್ಪನದ್ದು’ ಎಂದೆ. ಆಗ ಅಮ್ಮ ಗರಂ ಆಗಿ, ‘ಅಸಂಬದ್ಧವಾಗಿ ಮಾತನಾಡಬೇಡ. ಅವನ ಆಯ್ಕೆ ನನಗೆ ತಿಳಿದಿದೆ’ ಎಂದಳು’ ಎಂದಿದ್ದಾರೆ.

ಇದಕ್ಕೆ ಕಿಡಿಕಾರಿರುವ ನೆಟ್ಟಿಗರು ಅಪ್ಪ-ಅಮ್ಮನನ್ನು ಇಂಥ ವೈಯಕ್ತಿಕ ವಿಚಾರದಲ್ಲಿ ಎಳೆದು ತಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.