ಸಾರಾಂಶ
ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಮಹೇಂದ್ರವರಂ (ಆಂಧ್ರ): ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಇಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇದುವರೆಗೆ ಜಾರಿ ನಿರ್ದೇಶನಾಲಯವೊಂದೇ 1.25 ಲಕ್ಷ ಕೋಟಿ ರು. ಭ್ರಷ್ಟರ ಹಣವನ್ನು ಜಪ್ತಿ ಮಾಡಿದೆ. ಇದಕ್ಕೆ ಇತರೆ ಕೇಂದ್ರಿಯ ತನಿಖಾ ಸಂಸ್ಥೆಗಳೂ ಜಪ್ತಿ ಮಾಡಿದ ಹಣ ಸೇರಿಸಿದರೆ ಪ್ರಮಾಣ ಇನ್ನೂ ಹೆಚ್ಚುತ್ತದೆ. ಹೀಗಾಗಿ ಯಾರಿಂದ ಈ ಹಣವನ್ನು ಲೂಟಿ ಮಾಡಲಾಗಿತ್ತೋ ಆ ಹಣವನ್ನು ಮರಳಿ ಅವರಿಗೆ ತಲುಪಿಸುವುದು ಹೇಗೆ ಎಂಬುದರ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ’ ಎಂದು ಹೇಳಿದರು.ಇದೇ ವೇಳೆ, ‘ಈಗಾಗಲೇ ಅರ್ಹ ಮಾಲೀಕರಿಗೆ 17000 ಕೋಟಿ ರು. ಹಣ ಮರಳಿಸಲಾಗಿದೆ. ಯಾವುದೇ ಬಡ ವ್ಯಕ್ತಿಯ ಹಕ್ಕುಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ಹೇಳಿದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))