ಸಿಎಂ ಸ್ಟಾಲಿನ್‌ಗೆ ಚೀನಾದ ಮ್ಯಾಂಡರಿನ್‌ ಭಾಷೆಯಲ್ಲಿ ಬಿಜೆಪಿ ಹುಟ್ಟುಹಬ್ಬ ಹಾರೈಕೆ

| Published : Mar 02 2024, 01:47 AM IST

ಸಿಎಂ ಸ್ಟಾಲಿನ್‌ಗೆ ಚೀನಾದ ಮ್ಯಾಂಡರಿನ್‌ ಭಾಷೆಯಲ್ಲಿ ಬಿಜೆಪಿ ಹುಟ್ಟುಹಬ್ಬ ಹಾರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಮ್ಯಾಂಡರಿನ್‌ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಷಯ ಕೋರುವ ಮೂಲಕ ರಾಜ್ಯದ ಬಿಜೆಪಿ ಘಟಕ ಅವರಿಗೆ ತಿರುಗೇಟು ನೀಡಿದೆ.

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರ ಹುಟ್ಟುಹಬ್ಬದಂದು ಭಾರತೀಯ ಜನತಾ ಪಕ್ಷ ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಶುಭಾಶಯ ಕೋರಿದೆ.

ಈ ಮೂಲಕ ಇತ್ತೀಚೆಗೆ ನಡೆದ ಜಾಹೀರಾತು ತಗಾದೆಗೆ ಟಾಂಗ್‌ ನೀಡಿದೆ. ತಮಿಳುನಾಡು ಬಿಜೆಪಿ ತನ್ನ ಶುಭಾಶಯದಲ್ಲಿ ‘ಬಿಜೆಪಿ ತಮಿಳುನಾಡಿನ ಪರಿವಾಗಿ ಸನ್ಮಾನ್ಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ತಮ್ಮ ಇಷ್ಟದ ಭಾಷೆಯಾದ ಮ್ಯಾಂಡರಿನ್‌ನಲ್ಲಿ ಶುಭಾಶಯ ಕೋರುತ್ತೇವೆ’ ಎಂದು ತಿಳಿಸಿದೆ.

ಕಳೆದ ವಾರ ತಮಿಳುನಾಡನಲ್ಲಿ ಇಸ್ರೋ ಲಾಂಚ್‌ ಪ್ಯಾಡ್‌ ಶಂಕುಸ್ಥಾಪನೆ ವೇಳೆ ಪತ್ರಿಕೆಯ ಜಾಹೀರಾತಿನಲ್ಲಿ ಚೀನಾ ಧ್ವಜವಿರುವ ರಾಕೆಟ್‌ ಅಳವಡಿಸಿ ಎಡವಟ್ಟು ಮಾಡಿತ್ತು.