ಸಾರಾಂಶ
ಚೆನ್ನೈ: ಇಲ್ಲಿನ ತಾಂಬರಂ ರೈಲು ನಿಲ್ದಾಣದಲ್ಲಿ 4 ಕೋಟಿ ರು ಹಣ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ಸೇರಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ತಂಡದ ಸೂಚನೆಯಂತೆ ಹಣ ಒಯ್ಯಲಾಗುತ್ತಿತ್ತು ಎಂದು ಆರೋಪಿಗಳು ಹೇಳಿದ್ದಾರೆ ಎಂದು ಗೊತ್ತಾಗಿದೆ
ಆರೋಪಿಗಳಾದ ಬಿಜೆಪಿ ಕಾರ್ಯಕರ್ತರ, ಖಾಸಗಿ ಹೋಟೆಲ್ ಮ್ಯಾನೇಜರ್ ಸತೀಶ್, ಆತನ ಸಹೋದರ ನವೀನ್, ಚಾಲಕ ಪೆರುಮಾಳ್ ಆರು ಬ್ಯಾಗ್‌ಗಳಲ್ಲಿ 4 ಕೋಟಿ ರು. ರೈಲಿನಲ್ಲಿ ತಿರುನಲ್ವೇಲಿಗೆ ಸಾಗಿಸುತ್ತಿದ್ದಾಗ ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ ಪಡೆದಿದೆ. ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ತಂಡದ ಸೂಚನೆಯಂತೆ ನಡೆದುಕೊಂಡಿರುವುದಾಗಿ ಸತೀಶ್ ಒಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.ತಾಂಬರಂ ರೈಲು ನಿಲ್ದಾಣದಲ್ಲಿ ಫ್ಲೈಯಿಂಗ್ ಸ್ಕ್ವಾಡ್ 4 ಕೋಟಿ ರು. ವಶಪಡಿಸಿಕೊಂಡಿದೆ. ಈ ಹಣ 10 ಲಕ್ಷ ರು.ಗಿಂತ ಹೆಚ್ಚಿರುವುದರಿಂದ ಐಟಿ ಇಲಾಖೆಗೆ ಕಳಿಸಿದ್ದು, ಅದು ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.