ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ. ಈ ಸೀಟನ್ನು ಕಾಂಗ್ರೆಸ್, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ. ತಮಿಳ್ನಾಡಲ್ಲಿ ವಿಜಯ್ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡಿತ್ತು, ಜೊತೆಗೆ ಟಿವಿಕೆ-ಕಾಂಗ್ರೆಸ್ ಮೈತ್ರಿಕೂಟ ರಚನೆಯಲ್ಲಿ ಪ್ರವೀಣ್ ಚಕ್ರವರ್ತಿ ಮಹತ್ವದ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಎಐಎಡಿಎಂಕೆಯ ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನಕ್ಕೆ ಜೂ.18ರಂದು ಚುನಾವಣೆ ನಡೆಯಲಿದೆ.
ಏಕೈಕ ರಾಜ್ಯಸಭಾ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಮುಖ್ಯಮಂತ್ರಿ ವಿಜಯ್
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ. ಈ ಸೀಟನ್ನು ಕಾಂಗ್ರೆಸ್, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.