ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮೌಲ್ಯಯುತ ಜಾಗತಿಕ ಕಂಪನಿಗಳ ಪೈಕಿ ಟಿಸಿಎಸ್ ಮತ್ತು ಇನ್ಫೋಸಿಸ್ ವಿಶ್ವದಲ್ಲೇ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಜೊತೆಗೆ ಜಗತ್ತಿನ ಟಾಪ್ 25 ಕಂಪನಿಗಳಲ್ಲಿ ಭಾರತದ 8 ಕಂಪನಿಗಳು ಸ್ಥಾನ ಪಡೆದಿವೆ.
ನವದೆಹಲಿ: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮೌಲ್ಯಯುತ ಜಾಗತಿಕ ಕಂಪನಿಗಳ ಪೈಕಿ ಟಿಸಿಎಸ್ ಮತ್ತು ಇನ್ಫೋಸಿಸ್ ವಿಶ್ವದಲ್ಲೇ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಜೊತೆಗೆ ಜಗತ್ತಿನ ಟಾಪ್ 25 ಕಂಪನಿಗಳಲ್ಲಿ ಭಾರತದ 8 ಕಂಪನಿಗಳು ಸ್ಥಾನ ಪಡೆದಿವೆ.
ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿರುವ ‘ಐಟಿ ಸರ್ವೀಸ್ 25(2026) ’ ವರದಿ
ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿರುವ ‘ಐಟಿ ಸರ್ವೀಸ್ 25(2026) ’ ವರದಿ ಅನ್ವಯ ಆ್ಯಕ್ಸೆಂಚರ್ 3.8 ಲಕ್ಷ ಕೋಟಿ ರು. ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು 1.93 ಲಕ್ಷ ಕೋಟಿ ರು.ನೊಂದಿಗೆ ಟಿಸಿಎಸ್ 2ನೇ ಸ್ಥಾನ ಮತ್ತು 1.49 ಲಕ್ಷ ಕೋಟಿ ರು.ನೊಂದಿಗೆ ಇನ್ಫೋಸಿಸ್ 3ನೇ ಸ್ಥಾನದಲ್ಲಿದೆ.
ಅಗ್ರ 25ರಲ್ಲಿ ಭಾರತದ 8 ಕಂಪನಿಗಳು
ಉಳಿದಂತೆ ಹೆಚ್‌ಸಿಎಲ್, ವಿಪ್ರೋ, ಟೆಕ್ ಮಹೀಂದ್ರಾ , ಎಲ್‌ಟಿಐ ಮೈಂಡ್‌ಟ್ರೀ, ಪರ್ಸಿಸ್ಟೆಂಟ್ ಸಿಸ್ಟಮ್, ಹೆಕ್ಸಾವೇರ್ ಟೆಕ್ನಾಲಜಿ ಸ್ಥಾನ ಪಡೆದಿದೆ.
