ರಾಘೋಪುರದಲ್ಲಿ ಪ್ರಶಾಂತ್ ಕಿಶೋರ್‌ ವರ್ಸಸ್ ತೇಜಸ್ವಿ?

| N/A | Published : Oct 12 2025, 01:00 AM IST

ಸಾರಾಂಶ

ಲಾಲು ಕುಟುಂಬದ ಭದ್ರಕೋಟೆ ಆಗಿರುವ ಬಿಹಾರದ ರಾಘೋಪುರದಲ್ಲಿ ಲಾಲು ಪುತ್ರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಜನ್ ಸುರಾಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್‌ (ಪಿಕೆ) ಸ್ಪರ್ಧೆಗಿಳಿವ ಸಾಧ್ಯತೆ ಇದೆ ಎಂಬ ಗುಲ್ಲು ಹರಡಿದೆ.

ಪಟನಾ: ಲಾಲು ಕುಟುಂಬದ ಭದ್ರಕೋಟೆ ಆಗಿರುವ ಬಿಹಾರದ ರಾಘೋಪುರದಲ್ಲಿ ಲಾಲು ಪುತ್ರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಜನ್ ಸುರಾಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್‌ (ಪಿಕೆ) ಸ್ಪರ್ಧೆಗಿಳಿವ ಸಾಧ್ಯತೆ ಇದೆ ಎಂಬ ಗುಲ್ಲು ಹರಡಿದೆ.

ಇದರ ನಡುವೆಯೇ ಶನಿವಾರ ರಾಘೋಪುರದಲ್ಲಿ ಪ್ರಚಾರ ಆರಂಭಿಸಿರುವ ಪಿಕೆ, ‘6 ವರ್ಷ ಹಿಂದೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಮೇಠಿಯಲ್ಲಿ ಹೀನಾಯವಾಗಿ ಸೋತಂತೆ, ತೇಜಸ್ವಿ ಯಾದವ್ ಅವರೂ ರಾಘೋಪುರದಲ್ಲಿ ಸೋಲುತ್ತಾರೆ’ ಎಂದು ಭವಿಷ್ಯ ನುಡಿದಿದ್ದಾರೆ.

‘ಒಂದು ಕುಟುಂಬದ ಪ್ರಾಬಲ್ಯ ಕೊನೆಗಾಣಿಸಲು ಬಯಸುವ ಕ್ಷೇತ್ರದ ಜನರ ಪ್ರತಿಕ್ರಿಯೆಗೆ ನಾನು ರಾಘೋಪುರಕ್ಕೆ ಬಂದಿದ್ದೇನೆ. ತೇಜಸ್ವಿಗೂ ಮುನ್ನ ಅವರ ತಂದೆ-ತಾಯಿ ಪ್ರತಿನಿಧಿಸಿದ್ದರು. ಆದರೂ ಮೂಲಸೌಕರ್ಯ ಇಲ್ಲದೆ ಕ್ಷೇತ್ರ ಅಳುತ್ತಿದೆ. ಹಾಗಾಗಿ ನಮ್ಮ ಪಕ್ಷ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ನಾನೇ ಅಭ್ಯರ್ಥಿ ಆಗುತ್ತೇನೆಯೇ ಎನ್ನುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ತೇಜಸ್ವಿ ಭವಿಷ್ಯವು 2019ರಲ್ಲಿ ರಾಹುಲ್‌ ಗಾಂಧಿ ಅವರಂತೇ ಆಗುತ್ತದೆ. ಆಗ ಅವರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭದ್ರಕೋಟೆ ಅಮೇಠಿ ಕಳೆದುಕೊಂಡಿದ್ದರು’ ಎಂದರು.

ಬಿಹಾರದಲ್ಲಿ 100 ಕ್ಷೇತ್ರಗಳಲ್ಲಿ ಒವೈಸಿ ಪಕ್ಷ ಕಣಕ್ಕೆ

ಪಟನಾ: ನ.6 ಮತ್ತು ನ.11ರಂದು ನಡೆಯುವ ಬಿಹಾರದ ವಿಧಾನಸಭೆ ಚುನಾವಣೆಗೆ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ತಿಳಿಸಿದೆ. ಈ ಸಂಖ್ಯೆಯು ಕಳೆದ ಚುನಾವಣೆಗಿಂತ 5 ಪಟ್ಟು ಹೆಚ್ಚೆಂದು ಅದು ಹೇಳಿದೆ.ಈ ಕುರಿತು ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಅಖ್ತರುಲ್‌ ಇಮಾಮ್‌, ‘ನಾವು ಬಿಹಾರದಲ್ಲಿ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ತಯಾರಿ ಆರಂಭಿಸಿದ್ದೇವೆ. ಇಲ್ಲಿ ದಶಕಗಳಿಂದ ಬಿಜೆಪಿಯ ಎನ್‌ಡಿಎ ಮತ್ತು ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದು, ಇವುಗಳಿಗೆ ನಾವು ಪ್ರತಿಸ್ಪರ್ಧಿಯಾಗಲಿದ್ದೇವೆ’ ಎಂದರು.

ಇದೇ ವೇಳೆ ‘ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಇತರೆ ಪಕ್ಷಗಳೊಂದಿಗೆ ಚರ್ಚೆ ಆರಂಭವಾಗಿದೆ’ ಎಂದು ತಿಳಿಸಿದರು.ಕಳೆದ ಸಲ ಎಐಎಂಐಎಂ ಕಾಂಗ್ರೆಸ್‌ ಪಕ್ಷದ ಮತಗಳನ್ನು ಕೆಲವು ಕ್ಷೇತ್ರಗಳಲ್ಲಿ ಕಿತ್ತು, ಅದರ ಸೋಲಿಗೆ ಕಾರಣವಾಗಿತ್ತು.

ಆರ್‌ಜೆಡಿ ಮೊದಲು ಸರ್ಕಾರ ರಚಿಸಲಿ: ತೇಜಸ್ವಿ ಬಗ್ಗೆ ಸೋದರ ತೇಜ್ ಲೇವಡಿ

ಪಟನಾ: ‘ಅಧಿಕಾರ ಏರಿದ ಕೂಡಲೇ ಪ್ರತಿ ಕುಟುಂಬಕ್ಕೂ ಒಂದೊಂದು ಸರ್ಕಾರಿ ನೌಕರಿ’ ಎಂದು ಭರವಸೆ ನೀಡಿದ್ದ ಆರ್‌ಜೆಡಿ ತೇಜಸ್ವಿ ಯಾದವ್‌ ಬಗ್ಗೆ ಅವರ ಸೋದರ, ಉಚ್ಚಾಟಿತ ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಲೇವಡಿ ಮಾಡಿದ್ದಾರೆ. ‘ಆರ್‌ಜೆಡಿ ಮೊದಲು ಸರ್ಕಾರ ರಚಿಸಲಿ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೆಲ ದಿನಗಳಲ್ಲಿಯೇ ದೊಡ್ಡ ಘೋಷಣೆಯನ್ನು ಮಾಡಲಿದ್ದೇವೆ. ನಮ್ಮ ಜನಶಕ್ತಿ ಜನತಾದಳದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ’ ಎಂದರು. ಜತೆಗೆ ‘ಈಗಾಗಲೇ ಹಲವು ಪಕ್ಷಗಳ ಜೊತೆಗೆ ಮಾತುಕತೆಯಲ್ಲಿ ತೊಡಗಿದ್ದೇವೆ. ಮುಂದೆ ನಿಮಗೇ ತಿಳಿಯಲಿದೆ’ ಎಂದೂ ಹೇಳಿದರು.

Read more Articles on