ತೆಲಂಗಾಣದಲ್ಲಿ ಎಸ್ಸಿ ಒಳಮೀಸಲು ಜಾರಿ : ದೇಶದಲ್ಲೇ ಮೊದಲು - ಎಸ್ಸಿಗಳ 3 ಭಾಗ ಮಾಡಿ ಮೀಸಲು ಹಂಚಿಕೆ

| N/A | Published : Apr 15 2025, 12:51 AM IST / Updated: Apr 15 2025, 04:45 AM IST

ಸಾರಾಂಶ

ಪರಿಶಿಷ್ಟ ಜಾತಿ (ಎಸ್ಸಿ) ಉಪಜಾತಿಗಳನ್ನು ಪ್ರತ್ಯೇಕವಾಗಿ ವಿಭಾಗಿಸಿ ಅವರಿಗೆ ಒಳಮೀಸಲು ನೀಡುವ ಐತಿಹಾಸಿಕ ಅಧಿಸೂಚನೆಯನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರ, ಅಂಬೇಡ್ಕರ್‌ ಅವರ ಜನ್ಮದಿನವಾದ ಸೋಮವಾರ ಹೊರಡಿಸಿದೆ. 

ಒಳಮೀಸಲು ಏಕೆ?

ಎಸ್‌ಸಿ ಸಮುದಾಯದಲ್ಲಿನ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುದಳಿವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಿನ ಲಾಭ ಸಿಗುತ್ತಿಲ್ಲ. ಮೀಸಲು, ಬಲಾಢ್ಯ ಪಂಗಡಗಳ ಪಾಲಾಗುತ್ತಿದೆ ಎಂಬ ಆರೋಪವಿತ್ತು. ಇದನ್ನು ದೂರ ಮಾಡುವ ಸಲುವಾಗಿ ಇದೀಗ ಅತ್ಯಂತ ಹಿಂದುಳಿದ ಉಪಜಾತಿಗಳಿಗೂ ಕನಿಷ್ಠ ಮೀಸಲಿನ ಭರವಸೆ ನೀಡಲಾಗಿದೆ.

ಒಳ ಮೀಸಲು ಹೇಗೆ?

ರಾಜ್ಯದಲ್ಲಿನ ಎಸ್ಸಿ ಸಮುದಾಯಕ್ಕೆ ಶೇ.15 ಮೀಸಲಿದೆ. ಅದರಲ್ಲಿನ 59 ಉಪಜಾತಿಗಳನ್ನು 3 ಭಾಗವಾಗಿ ವಿಂಗಡಿಸಿ ಅವರಿಗೆ ಕ್ರಮವಾಗಿ ಶೇ.1, ಶೇ.9 ಮತ್ತು ಶೇ.5ರಷ್ಟು ಒಳಮೀಸಲು ನೀಡಲಾಗುವುದು. ಈ ಮೂಲಕ ಅತ್ಯಂತ ಹಿಂದುಳಿದ ಉಪಜಾತಿಗಳಿಗೂ ಕನಿಷ್ಠ ಮೀಸಲಿನ ಲಾಭ ಖಚಿತಪಡಿಸಲಾಗುವುದು.

ಮೀಸಲು ವಿಂಗಡಣೆ ಹೇಗೆ?- ಗುಂಪು-1ರಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ 15 ಸಮುದಾಯ. ಅವುಗಳಿಗೆ ಶೇ.1ರಷ್ಟು ಮೀಸಲು- ಗುಂಪು-2ರಲ್ಲಿ ಕನಿಷ್ಠವೂ ಅಲ್ಲದ ಗರಿಷ್ಠವೂ ಅಲ್ಲದ ಮೀಸಲು ಸೌಲಭ್ಯ ಪಡೆವ 18 ಸಮುದಾಯ ಇವೆ. ಅವುಗಳಿಗೆ ಶೇ.9 ಮೀಸಲು- ಗುಂಪು-3ರಲ್ಲಿ ಪೂರ್ಣಪ್ರಮಾಣದ ಸೌಲಭ್ಯ ಪಡೆಯುತ್ತಿರುವ 26 ಸಮುದಾಯ. ಅವುಗಳಿಗೆ ಶೇ.5ರಷ್ಟು ಮೀಸಲು ಸವಲತ್ತುಸುರ್ದೀಘ ಕಾಲದ

ಬೇಡಿಕೆ ಈಡೇರಿದೆ

ಸಾಮಾಜಿಕ ನ್ಯಾಯದ ಕಾಯ್ದೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಅಂಬೇಡ್ಕರ್‌ ಅವರಿಗೆ ಜನ್ಮದಿನದ ಅತ್ಯುತ್ತಮ ಗೌರವ ಸಲ್ಲಿಸಿದೆ. ಇಂಥದ್ದೊಂದು ಕಾಯ್ದೆ ಮೂಲಕ ಎಸ್‌ಸಿ ಸಮುದಾಯದ ವರ್ಗೀಕರಣದ ಕುರಿತ ಸುದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಿದಂತಾಗಿದೆ.

- ರೇವಂತ್‌ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿಪಿಟಿಐ ಹೈದರಾಬಾದ್‌

ಪರಿಶಿಷ್ಟ ಜಾತಿ (ಎಸ್ಸಿ) ಉಪಜಾತಿಗಳನ್ನು ಪ್ರತ್ಯೇಕವಾಗಿ ವಿಭಾಗಿಸಿ ಅವರಿಗೆ ಒಳಮೀಸಲು ನೀಡುವ ಐತಿಹಾಸಿಕ ಅಧಿಸೂಚನೆಯನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರ, ಅಂಬೇಡ್ಕರ್‌ ಅವರ ಜನ್ಮದಿನವಾದ ಸೋಮವಾರ ಹೊರಡಿಸಿದೆ. ಇದರೊಂದಿಗೆ ಎಸ್ಸಿ ಸಮುದಾಯದಲ್ಲಿ ಒಳ ಮೀಸಲು ಜಾರಿ ಮಾಡಿದ ದೇಶದ ಮೊದಲ ರಾಜ್ಯವಾಗಿ ತೆಲಂಗಾಣ ಹೊರಹೊಮ್ಮಿದೆ.

ಇಂಥದ್ದೊಂದು ಒಳಮೀಸಲು ಜಾರಿ ಮಾಡುವ ಮೂಲಕ ಸಮುದಾಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಉಪಜಾತಿಗಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ನೆರೆಯ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಕೆ ಪದೇ ಪದೇ ಮುಂದೂಡಿಕೆಯಾಗುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ಆಡಳಿತದ ತೆಲಂಗಾಣದಲ್ಲಿ ಒಳಮೀಸಲು ಜಾರಿಗೊಳಿಸಲಾಗಿದೆ.

ಏನಿದು ಒಳಮೀಸಲು?:

ರಾಜ್ಯದಲ್ಲಿ ಎಸ್ಸಿ ಮೀಸಲು ಸೂಕ್ತವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಸಿ ಸಮುದಾಯದ ವರ್ಗೀಕರಣಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾ। ಶಮೀಮ್‌ ಅಖ್ತರ್‌ ನೇತೃತ್ವದಲ್ಲಿ ಆಯೋಗವೊಂದನ್ನು ತೆಲಂಗಾಣ ಸರ್ಕಾರ ನೇಮಿಸಿತ್ತು. ಅದು ಪರಿಶಿಷ್ಟ ಜಾತಿಯ ಅಡಿ ಬರುವ 59 ಸಮುದಾಯಗಳನ್ನು 3 ಗುಂಪುಗಳಾಗಿ ವಿಂಗಡಿಸಿ, ಅವವುಗಳಿಗೆ ಸರ್ಕಾರಿ ಕೆಲಸ ಹಾಗೂ ಶಿಕ್ಷಣದಲ್ಲಿ ಶೇ.15ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ವರ್ಗೀಕರಣದ ಉಪಸಮಿತಿಯ ಅಧ್ಯಕ್ಷರೂ ಆಗಿದ್ದ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ, ‘ಈ ಕ್ಷಣದಿಂದಲೇ ರಾಜ್ಯದಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ ಆದೇಶಿಸಿದ ಬಳಿಕ ಎಸ್‌ಸಿ ವರ್ಗೀಕರಣವನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ ಆಗಿದೆ. ಅಂತೆಯೇ, 2026ರ ಜನಣತಿಯಲ್ಲಿ ಎಸ್‌ಸಿ ಸಮುದಾಯದ ಜನಸಂಖ್ಯೆ ಅಧಿಕವಾದಲ್ಲಿ, ಮೀಸಲಾತಿಯನ್ನೂ ಅದಕ್ಕನುಗುಣವಾಗಿ ಹೆಚ್ಚಿಸಲಾಗುವುದು ಎಂದು ಹೇಳಿದರು.