‘ವಕ್ಫ್‌ ಮಂಡಳಿಯು ತನ್ನ ಬಳಿ ಇರುವ ಅಪಾರ ಪ್ರಮಾಣದ ಭೂಮಿ ಸದ್ಬಳಕೆ ಮಾಡದೇ ಹೋದ ಕಾರಣಕ್ಕೆ ಇಂದು ಮುಸ್ಲಿಂ ಯುವಕರು ಇಂದು ಪಂಕ್ಚರ್‌ ಅಂಗಡಿಯಲ್ಲಿ ಸೈಕಲ್‌, ಬೈಕ್‌ಗೆ ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಹಾರ ನಡೆಸಿದ್ದಾರೆ.

ಹಿಸಾರ್‌ (ಹರ್ಯಾಣ): ‘ವಕ್ಫ್‌ ಮಂಡಳಿಯು ತನ್ನ ಬಳಿ ಇರುವ ಅಪಾರ ಪ್ರಮಾಣದ ಭೂಮಿ ಸದ್ಬಳಕೆ ಮಾಡದೇ ಹೋದ ಕಾರಣಕ್ಕೆ ಇಂದು ಮುಸ್ಲಿಂ ಯುವಕರು ಇಂದು ಪಂಕ್ಚರ್‌ ಅಂಗಡಿಯಲ್ಲಿ ಸೈಕಲ್‌, ಬೈಕ್‌ಗೆ ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಹಾರ ನಡೆಸಿದ್ದಾರೆ.

ಹರ್ಯಾಣದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಮೋದಿ, ‘ವಕ್ಫ್‌ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಅದರಿಂದ ಬಡ ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯವಾಗುತ್ತಿತ್ತು. ಅಂತೆಯೇ, ಮುಸ್ಲಿಂ ಯುವಕರು ಸೈಕಲ್‌ಗಳ ಪಂಕ್ಚರ್‌ ಸರಿ ಮಾಡುತ್ತಿರಬೇಕಾಗಿ ಬರುತ್ತಿರಲಿಲ್ಲ’ ಎಂದರು. ಈ ಮೂಲಕ, ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ರೂಪಿತಗೊಂಡ ವಕ್ಫ್‌ ಮಂಡಳಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದರು.

2019ರಲ್ಲಿ ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ‘ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಪಂಕ್ಚರ್‌ ಹಾಕುವವರು ಮತ್ತು ಅಶಿಕ್ಷಿತರು ಪ್ರತಿಭಟಿಸುತ್ತಿದ್ದಾರೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.