ಸಾರಾಂಶ
ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರನ್ನರ್ ಅಪ್ ಕಾರನ್ನು ಪ್ರಶಾಂತ್ ಅಭಿಮಾನಿಗಳು ಧ್ವಂಸಗೊಳಿಸಿದ್ದಕ್ಕೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ಹೈದರಾಬಾದ್: ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅವರ ಅಭಿಮಾನಿಗಳು ಕಾರ್ಯಕ್ರಮದ ರನ್ನರ್ ಅಪ್ ಆಗಿರುವ ಅಮರ್‌ದೀಪ್ ಚೌಧರಿ ಅವರನ್ನು ಕಾರನ್ನು ಧ್ವಂಸಗೊಳಿಸಿದ್ದಾರೆ. ಈ ಕಾರಣಕ್ಕೆ ಪ್ರಶಾಂತ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ವಿಜೇತ ಎಂದು ಘೋಷಿಸಿದ ಬಳಿಕ ಅವರ ಅಭಿಮಾನಿಗಳು ಕಾರ್ಯಕ್ರಮದ ಸ್ಟುಡಿಯೋ ಬಳಿ ಜಮಾಯಿಸಿ ಅಲ್ಲೇ ಇದ್ದ ಚೌಧರಿ ಕಾರಿಗೆ ಹಾನಿ ಮಾಡಿದ್ದಾರೆ. ಪ್ರಶಾಂತ್ ಮತ್ತು ಆತನ ಫ್ಯಾನ್ಸ್ ವಿರುದ್ಧ ಕಾನೂನುಬಾಹಿರ ಗುಂಪುಗೂಡುವಿಕೆ ಮತ್ತು ವಿಧ್ವಂಸಕ ಕೃತ್ಯ ಪ್ರಕರಣ ದಾಖಲಿಸಲಾಗಿದೆ.