ಸೂರತ್ ಮೂಲದ ಉದ್ಯಮಿ ಲವ್‌ಜಿ ಬಾದ್‌ಶಾ 51 ಲಕ್ಷ ರು. ಬೆಲೆಯ ಟೆಸ್ಲಾ ಸೈಬರ್‌ಟ್ರಕ್ ಅನ್ನು  ಖರೀದಿಸಿ ಕಾರು ಉತ್ಸಾಹಿಗಳನ್ನು ಬೆರಗುಗೊಳಿಸಿದ್ದಾರೆ.

ಸೂರತ್: ಸೂರತ್ ಮೂಲದ ಉದ್ಯಮಿ ಲವ್‌ಜಿ ಬಾದ್‌ಶಾ 51 ಲಕ್ಷ ರು. ಬೆಲೆಯ ಟೆಸ್ಲಾ ಸೈಬರ್‌ಟ್ರಕ್ ಅನ್ನು ದುಬೈನಿಂದ ಖರೀದಿಸಿ ಕಾರು ಉತ್ಸಾಹಿಗಳನ್ನು ಬೆರಗುಗೊಳಿಸಿದ್ದಾರೆ. ಟೆಸ್ಲಾ ಸೈಬರ್‌ಟ್ರಕ್ ಖರೀದಿಸಿದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಇದು ವಿದ್ಯುತ್‌ಚಾಲಿತ ಕಾರ್‌ ಆಗಿದ್ದು, ಅಲ್ಟ್ರಾ-ಹಾರ್ಡ್ 30X ಕೋಲ್ಡ್-ರೋಲ್ಡ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲ್ಪಟ್ಟಿದೆ. ಸಾಮಾನ್ಯ ಕಾರುಗಳಿಗಿಂತ 30 ಪಟ್ಟು ಬಲಶಾಲಿಯಾಗಿದೆ. ಬುಲೆಟ್ ಪ್ರೂಫ್ ಗ್ಲಾಸ್, ವಿವಿಧ ಭೂಪ್ರದೇಶಗಳಿಗೆ ಹೊಂದಿಕೊಳ್ಳುವ ಏರ್ ಸಸ್ಪೆನ್ಷನ್ ಸಿಸ್ಟಂ ಹೊಂದಿದೆ.