ಸಾರಾಂಶ
ವಾಷಿಂಗ್ಟನ್: ಅಮೆರಿಕ ರಾತ್ರೋರಾತ್ರಿ ಇರಾನ್ನ ಭೂಗತ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ‘ಆಪರೇಷನ್ ಮಿಡ್ನೈಟ್ ಹ್ಯಾಮರ್’ ಎಂದು ಹೆಸರಿಟ್ಟಿತ್ತು. ಈ ದಾಳಿಗೆ 125 ವಿಮಾನಗಳು, 4 ಬಾಂಬರ್ಗಳು ಮತ್ತು 24 ಟಾಮ್ಹಾಕ್ ಕ್ಷಿಪಣಿಗಳನ್ನು ಬಳಸಲಾಗಿತ್ತು ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.
ಇರಾನ್ ಕಾಲಮಾನ ಭಾನುವಾರ ತಡರಾತ್ರಿ 2 ಗಂಟೆಯ ಸುಮಾರಿಗೆ (ಭಾರತದಲ್ಲಿ ಬೆಳಗ್ಗೆ ಸುಮಾರು 5 ಗಂಟೆಗೆ) ಆರಂಭವಾದ ಈ ದಾಳಿಯು ಕೇವಲ 25 ನಿಮಿಷಗಳಲ್ಲಿ ಮುಕ್ತಾಯವಾಯಿತು ಎಂದು ಅಮೆರಿಕದ ಸೇನಾಧಿಕಾರಿ ಜ. ಡಾನ್ ಕೇನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಾಂಬರ್ಗಳು ಮಿಸೌರಿ ನೆಲೆಯಿಂದ ರವಾನೆಯಾಗಿದ್ದವು ಎಂದು ಅವರು ಹೇಳಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಇರಾನ್ ಮೇಲಿನ ದಾಳಿಯನ್ನು ದಿಟ್ಟ ಮತ್ತು ಅದ್ಭುತ ಎಂದು ಕರೆದಿದ್ದು, ‘ಇರಾನ್ನ ಪರಮಾಣು ಮಹತ್ವಾಕಾಂಕ್ಷೆಗಳು ನಾಶವಾಗಿವೆ. ನಾವು ನಡೆಸಿದ ದಾಳಿಯನ್ನು ಇರಾನ್ನ ಸೇನೆ ಅಥವಾ ನಾಗರಿಕರನ್ನು ಗುರಿಯಾಗಿಸಿರಲಿಲ್ಲ’ ಎಂದು ಹೇಳಿದ್ದಾರೆ.
125 ವಿಮಾನ, 14 ಬಾಂಬರ್, 24 ಟಾಮ್ಹಾಕ್ ಬಳಕೆ
25 ನಿಮಿಷಗಳಲ್ಲೇ 3 ಅಣು ನೆಲೆಗಳ ಮೇಲೆ ದಾಳಿ
ಬಿ2 ಸ್ಟೆಲ್ ವಿಮಾನ, ಬಂಕರ್ ಬಸ್ಟರ್ ಬಾಂಬ್, ಟಾಮ್ಹಾಕ್ ಕ್ಷಿಪಣಿ
ಇದು ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನ. ನಾರ್ತ್ರೋಪ್ ಗ್ರಮ್ಮನ್ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದ್ದು, ಇದು ತನ್ನ ಸ್ಟೆಲ್ತ್ (ರಡಾರ್ಗಳ ಕಣ್ತಪ್ಪಿಸುವ) ಸಾಮರ್ಥ್ಯಕ್ಕೆ ಹೆಸರುವಾಸಿ. ಒಂದು ವಿಮಾನದ ವೆಚ್ಚ 18000 ಕೋಟಿ ರು.. ಇದು ಜಗತ್ತಿನ ಅತ್ಯಂತ ದುಬಾರಿ ಮಿಲಿಟರಿ ವಿಮಾನ ಎಂಬ ದಾಖಲೆ ಹೊಂದಿದೆ. ಒಮ್ಮೆ ಇಂಧನ ತುಂಬಿಸಿದರೆ ತಡೆರಹಿತ 11000 ಕಿ.ಮೀ ಸಂಚರಿಸಬಲ್ಲದು. ಆಗಸದಲ್ಲೇ ಇಂಧನ ತುಂಬಿಸಿ ಮತ್ತೆ ಅಷ್ಟೇ ದೂರ ಸಾಗುವ ಸಾಮರ್ಥ್ಯವೂ ಇದಕ್ಕಿದೆ. ಇವು ಸಾಂಪ್ರದಾಯಿಕ ಸ್ಫೋಟಕಗಳ ಜತೆಗೆ ಅಣ್ವಸ್ತ್ರಗಳನ್ನೂ ಹೊತ್ತೊಯ್ಯಬಲ್ಲವು. ಅಮೆರಿಕದ ಬಳಿ ಇರುವ 14000 ಕೆಜಿ ತೂಕದ ಬಂಕರ್ ಬಸ್ಟರ್ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕೆ ಮಾತ್ರ ಇದೆ.
==ನಂಬರ್ಗೇಮ್
18144 ಕೆ.ಜಿ.: ವಿಮಾನ ಹೊತ್ತೊಯ್ಯಬಲ್ಲ ಸ್ಫೋಟಕದ ಒಟ್ಟು ತೂಕ18000 ಕೋಟಿ ರು.: 1 ಬಿ-2 ಬಾಂಬರ್ ನಿರ್ಮಾಣದ ವೆಚ್ಚ
11112 ಕಿ.ಮೀ: ಒಂದು ಬಾರಿ ಇಂಧನ ತುಂಬಿಸಿದರೆ ಕ್ರಮಿಸಬಲ್ಲ ದೂರ==
ಬಂಕರ್ ಬಸ್ಟರ್ ಬಾಂಬ್
ಹೆಸರೇ ಸೂಚಿಸುವಂತೆ ಇವುಗಳು ನೆಲದಡಿಗಿರುವ ಯಾವುದೇ ನಿರ್ಮಾಣಗಳನ್ನು ಸುಲಭವಾಗಿ ಧ್ವಂಸ ಮಾಡಬಲ್ಲ ಸಾಮರ್ಥ್ಯದ ಬಾಂಬ್. ಅಣ್ವಸ್ತ್ರ ಹೊಂದಿರದ ಕ್ಷಿಪಣಿಗಳ ಪೈಕಿ ವಿಶ್ವದಲ್ಲೇ ಇವು ಅತ್ಯಂತ ಶಕ್ತಿಶಾಲಿ. ಭೂಮಿಯ ನೆಲದಾಳದಲ್ಲಿ 200-300 ಅಡಿ ಆಳದವೆಗೂ ಸಾಗಿ ಗುರಿಯನ್ನು ಧ್ವಂಸ ಮಾಡಬಲ್ಲದು. ಇವನ್ನು ಸರಣಿಯಾಗಿ ಒಂದೇ ಸ್ಥಳದ ಮೇಲೆ ಹಾರಿಸುವ ಮೂಲಕ ಸಾಕಷ್ಟು ಆಳದವರೆಗೆ ಹೋಗಬಹುದು. ಅಮೆರಿಕ ವಾಯುಸೇನೆಯ ಇರಾನ್ನ ಮೂರು ಪರಮಾಣು ಘಟಕಗಳ ಮೇಲೆ ದಾಳಿ ನಡೆಸಲು ಜಿಬಿಯು 28 ಮತ್ತು ಜಿಬಿಯು-57ಎ/ಬಿ ಬಂಕರ್ ಬಸ್ಟರ್ ಬಾಂಬ್ಗಳನ್ನು ಬಳಸಿದೆ.==ನಂಬರ್ಗೇಮ್
20.5 ಅಡಿ ಬಂಕರ್ ಬಸ್ಟರ್ ಬಾಂಬ್ ಉದ್ದ31.5 ಇಂಚು ಬಂಕರ್ ಬಸ್ಟರ್ ವ್ಯಾಸ
14000 ಕೆಜಿ ಬಾಂಬ್ನ ತೂಕ2404 ಕೆಜಿ ಬಾಂಬ್ನಲ್ಲಿರುವ ಸ್ಫೋಟಕದ ತೂಕ
200 ಅಡಿ ಬಾಂಬ್ ಸಾಗಬಹುದಾದ ಆಳ
ಟಾಮ್ಹಾಕ್ ಕ್ಷಿಪಣಿಇದು ಅಮೆರಿಕದ ನೌಕಾಪಡೆ ಬಳಸುವ ಅತ್ಯಾಧುನಿಕ ದೀರ್ಘ ಶ್ರೇಣಿಯ, ಎಲ್ಲಾ ಹವಾಮಾನಗಳಲ್ಲೂ ಕಾರ್ಯನಿರ್ವಹಿಸಬಲ್ಲ, ಸಬ್ಸಾನಿಕ್ (ಶಬ್ದಕ್ಕಿಂತ ಕೊಂಚ ಕಡಿಮೆ ವೇಗದಲ್ಲಿ ಚಲಿಸುವ) ಕ್ರೂಸ್ ಕ್ಷಿಪಣಿಗಳಾಗಿವೆ. ಇವುಗಳನ್ನು ಹಡಗು ಅಥವಾ ಜಲಾಂತರ್ಗಾಮಿಗಳಿಂದ ಲಾಂಚ್ ಮಾಡಬಹುದು. ಟಾಮ್ಹಾಕ್ಗಳು ಕಡಿಮೆ ಎತ್ತರದಲ್ಲಿ ಹಾರುವುದರಿಂದ, ವೈರಿಗಳ ರಡಾರ್ ಅಥವಾ ವಾಯುಪಡೆಯ ಕಣ್ತಪ್ಪಿಸಿ ಸಾಗಬಲ್ಲವು. ಇವುಗಳು ಜಿಪಿಎಸ್ ಆಧಾರದಲ್ಲಿ ಚಲಿಸುತ್ತವೆ. ಟಾಮ್ಹಾಕ್ಗಳಲ್ಲಿರುವ ಕ್ಷಿಪಣಿಗಳ ಮಾರ್ಗವನ್ನು ಹಾರಾಟದ ಮಧ್ಯದಲ್ಲಿ ಬದಲಾಯಿಸಬಹುದು. ಇದರಿಂದ, ಅವುಗಳ, ಗುರಿಗಳನ್ನು ಬದಲಾಯಿಸಲು ಅಥವಾ ಅಗತ್ಯವಿದ್ದರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸಾಧ್ಯ.
ನಂಬರ್ಗೇಮ್
5.6 ಮೀಟರ್ ಟಾಮ್ಹಾಕ್ ಉದ್ದ1600 ಕೆ.ಜಿ ಕ್ಷಿಪಣಿಗಳ ತೂಕ
880 ಕಿ.ಮೀ ಗಂಟೆಗೆ ಸಂಚಾರ ಸಾಮರ್ಥ್ಯ1600 ಕಿ.ಮೀ ಕ್ಷಿಪಣಿ ಕ್ರಮಿಸಬಲ್ಲ ದೂರ