6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ನಿಗಾ: ಕೆನಡಾ ಸರ್ಕಾರ

| Published : Oct 20 2024, 01:56 AM IST / Updated: Oct 20 2024, 04:59 AM IST

6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ನಿಗಾ: ಕೆನಡಾ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೆನಡಾದಲ್ಲಿನ ಭಾರತೀಯ ರಾಯಭಾರಿ ಸೇರಿ 6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ವಿದೇಶಾಂಗ ಸಚಿವೆ ಮೆಲೆನಿಯಾ ಜಾಲಿ ಅವರು ‘ನಾವು ದೇಶದಲ್ಲಿನ ಮಿಕ್ಕ ಭಾರತೀಯ ರಾಯಭಾರಿ ಕಚೇರಿಗಳ ರಾಜತಾಂತ್ರಿಕರ ಮೇಲೂ ನಿಗಾವಹಿಸಿದ್ದೇವೆ’ ಎಂದು ಹೇಳಿದ್ದಾರೆ.

ಒಟ್ಟಾವಾ: ಕೆನಡಾದಲ್ಲಿನ ಭಾರತೀಯ ರಾಯಭಾರಿ ಸೇರಿ 6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ವಿದೇಶಾಂಗ ಸಚಿವೆ ಮೆಲೆನಿಯಾ ಜಾಲಿ ಅವರು ‘ನಾವು ದೇಶದಲ್ಲಿನ ಮಿಕ್ಕ ಭಾರತೀಯ ರಾಯಭಾರಿ ಕಚೇರಿಗಳ ರಾಜತಾಂತ್ರಿಕರ ಮೇಲೂ ನಿಗಾವಹಿಸಿದ್ದೇವೆ’ ಎಂದು ಹೇಳಿದ್ದಾರೆ.

ಮಾಂಟ್ರಿಯಲ್‌ನಲ್ಲಿ ಮಾತನಾಡಿದ ಜಾಲಿ,‘ ಟೊರಂಟೋ, ವ್ಯಾಂಕೋವರ್‌ ಮತ್ತು ಮಾಂಟ್ರಿಯಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ರಾಯಭಾರಿಗಳನ್ನು ನಾವು ಗಮನಿಸುತ್ತಿದ್ದೇವೆ. ಅವರ ಮೇಲೆ ನಿಗಾವಹಿಸಿದ್ದೇವೆ. ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಯಾವುದೇ ರಾಯಭಾರಿಗಳನ್ನು ಕೆನಡಾ ಸಹಿಸುವುದಿಲ್ಲ. ನಮ್ಮ ಇತಿಹಾಸದಲ್ಲಿ ಇಂತಹ ಅಂತಾರಾಷ್ಟ್ರೀಯ ದಮನವನ್ನು ನಾವು ಎಂದಿಗೂ ನೋಡಿಲ್ಲ, ಮತ್ತು ಅದಕ್ಕೆ ಕೆನಡಾದಲ್ಲಿ ಆಸ್ಪದ ಕೊಡುವುದಿಲ್ಲ’ ಎಂದು ಎಚ್ಚರಿಸಿದರು.

ಕೆನಡಾ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ 6 ಭಾರತೀಯ ದೂತರನ್ನು ಕೆನಡಾ ಸರ್ಕಾರ ಉಚ್ಚಾಟಿಸಿತ್ತು.