ಕೇದಾರನಾಥದಲ್ಲಿ ಭಾರಿ ಭಕ್ತ ಸಂದಣಿ: ನೂಕು ನುಗ್ಗಲು

| Published : May 27 2024, 01:06 AM IST / Updated: May 27 2024, 04:43 AM IST

ಕೇದಾರನಾಥದಲ್ಲಿ ಭಾರಿ ಭಕ್ತ ಸಂದಣಿ: ನೂಕು ನುಗ್ಗಲು
Share this Article
  • FB
  • TW
  • Linkdin
  • Email

ಸಾರಾಂಶ

ಚಾರ್‌ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಕೇದಾರನಾಥ: ಚಾರ್‌ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನೂಕುನುಗ್ಗಲಿನ ಸ್ಥಿತಿ ಉಂಟಾಗಿದ್ದು, ಭಕ್ತರು ಸಿಲುಕಿ ಪರದಾಡಿದ ಘಟನೆ ಶನಿವಾರ ನಡೆದಿದೆ.

ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ, ಕೇದಾರನಾಥ ದೇಗುಲಕ್ಕೆ 40 ಕಿ.ಮೀ. ಸಮೀಪದ ಸೀತಾಪುರದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಭಕ್ತರು ಮಾರ್ಗಮಧ್ಯೆ ಸಿಲುಕಿದ್ದಾರೆ. ಈ ಜನದಟ್ಟಣೆಯಲ್ಲಿ ವಾಹನಗಳೂ ಸಿಲುಕಿಕಿಕೊಂಡಿವೆ. ‘ಜನ ದಟ್ಟಣೆಯನ್ನು ನಿಯಂತ್ರಿಸಲು ಉತ್ತರಾಖಂಡ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿಲ್ಲ’ ಎಂದು ಭಕ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಈ ನಡುವೆ ಕೆಲವರು, ಈಗ ಕೇದಾರನಾಥಕ್ಕೆ ಹೋಗಲು ಪ್ರಶಸ್ತ ಸಮಯವಲ್ಲ ಎಂದು ಟ್ವೀಟರ್‌ನಲ್ಲಿ ಮನವಿ ಮಾಡಿದ್ದಾರೆ.

ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಜೂ. 6ರ ವರೆಗೂ ಇದ್ದ ಚಾರ್ ಧಾಮ್ ಯಾತ್ರೆಯ ಆಫ್‌ಲೈನ್ ನೋಂದಣಿಯನ್ನು ಮೇ 31ಕ್ಕೆ ಇಳಿಸಿದೆ.