ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ 9 ಜನರು ಸಾವನ್ನಪ್ಪಿದ ಭೀಕರ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದೆಹಲಿಯಲ್ಲಿ ಭೀಕರ ಅಗ್ನಿ ಅವಘಡನವದೆಹಲಿ: ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ 9 ಜನರು ಸಾವನ್ನಪ್ಪಿದ ಭೀಕರ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಏನಾಯ್ತು?:

ರಾಜೇಂದ್ರ ಕಶ್ಯಪ್‌ ಎಂಬ ವ್ಯಾಪಾರಿಗೆ ಸೇರಿದ ಕಟ್ಟಡದ ನೆಲಮಹಡಿ, ಮೊದಲ ಮಹಡಿಯಯಲ್ಲಿ ಬಟ್ಟೆ ಮತ್ತು ಸೌಂದರ್ಯವರ್ಧಕ ವಸ್ತುಗಳ ಶೋರೂಂ ಇದೆ. ಉಳಿದ ಎರಡು ಮಹಡಿಗಳಲ್ಲಿ ರಾಜೇಂದ್ರ ಕಶ್ಯಪ್‌, ತಮ್ಮ ಪತ್ನಿ, 5 ಗಂಡು ಮಕ್ಕಳು, ಓರ್ವ ಪುತ್ರಿ, ನಾಲ್ವರು ಸೊಸೆಯರು ಮತ್ತು 7 ಮೊಮ್ಮಕಳೊಂದಿಗೆ ವಾಸವಿದ್ದಾರೆ. ಘಟನೆ ನಡೆದಾಗ ಕಶ್ಯಪ್‌ ಮತ್ತು ಅವರ ಪುತ್ರ ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ.

ಬುಧವಾರ ಮುಂಜಾನೆ ಕಟ್ಟಡ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ದಹನಶೀಲ ವಸ್ತುಗಳು ಇದ್ದ ಕಾರಣ ಬಹುಬೇಗ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ಈ ವೇಳೆ ಮನೆಯೊಳಗಿದ್ದವರು ಹೊರಗೆ ಬರಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮೂವರು ಕಟ್ಟಡದಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಬೆಂಕಿ ಸುದ್ದಿ ತಿಳಿದ ತಕ್ಷಣವೇ 30 ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಯತ್ನ ಮಾಡಿದವಾದರೂ, ಮಧ್ಯಾಹ್ನದ ವೇಳೆಗಷ್ಟೇ ಪೂರ್ಣ ಪ್ರಮಾಣದಲ್ಲಿ ಬೆಂಕಿ ನಂದಿದೆ.