ಸಾರಾಂಶ
ಉತ್ತರ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಲಿತ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಹೋದ್ಯೋಗಿ ನರ್ಸ್ ಮತ್ತು ವಾರ್ಡ್ ಬಾಯ್ ಸಹಕಾರದೊಂದಿಗೆ ವೈದ್ಯ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಲಖನೌ: ದಲಿತ ನರ್ಸ್ ಒಬ್ಬಳ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ಅತ್ಯಾಚಾರವೆಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ಭಾನುವಾರ ಸಂತ್ರಸ್ತೆಗೆ ಕೆಲಸ ಮುಗಿದ ಬಳಿಕ ವೈದ್ಯ ಶಹನವಾಜ್‌ನನ್ನು ಭೇಟಿಯಾಗುವಂತೆ ಅದೇ ಆಸ್ಪತ್ರೆಯ ಮೆಹ್ನವಾಜ್ ಎಂಬ ಇನ್ನೊಬ್ಬ ನರ್ಸ್ ಸೂಚಿಸಿದ್ದಳು.
ಆದರೆ ಇದಕ್ಕೆ ಸಂತ್ರಸ್ತೆ ಒಪ್ಪದೇ ಇದ್ದಾಗ ಮೆಹ್ನವಾಜ್ ಹಾಗೂ ವಾರ್ಡ್ ಬಾಯ್ ಜುನೈದ್ ಇಬ್ಬರೂ ಸೇರಿಕೊಂಡು ಬಲವಂತವಾಗಿ ಮೇಲಿನ ಮಹಡಿಗೆ ಕರೆದೊಯ್ದಿದ್ದಾರೆ. ವೈದ್ಯ ಶಹನವಾಜ್ ತನ್ನ ಇಬ್ಬರು ಸಹಚರರ ನೆರವು ಪಡೆದು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
)
;Resize=(128,128))
;Resize=(128,128))
;Resize=(128,128))
;Resize=(128,128))