ಸಾರಾಂಶ
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ। ಎನ್.ವಿ.ಅಂಜಾರಿಯಾ, ಗುವಾಹಟಿ ಹೈಕೋರ್ಟ್‌ನ ನ್ಯಾ। ವಿಜಯ್ ಬಿಷ್ಣೋಯ್, ಬಾಂಬೆ ಹೈಕೋರ್ಟ್‌ನ ನ್ಯಾ। ಎ.ಎಸ್.ಚಂದೂರ್ಕರ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಶುಕ್ರವಾರ ಶಪಥ ಸ್ವೀಕರಿಸಿದರು.
ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ। ಎನ್.ವಿ.ಅಂಜಾರಿಯಾ, ಗುವಾಹಟಿ ಹೈಕೋರ್ಟ್‌ನ ನ್ಯಾ। ವಿಜಯ್ ಬಿಷ್ಣೋಯ್, ಬಾಂಬೆ ಹೈಕೋರ್ಟ್‌ನ ನ್ಯಾ। ಎ.ಎಸ್.ಚಂದೂರ್ಕರ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಶುಕ್ರವಾರ ಶಪಥ ಸ್ವೀಕರಿಸಿದರು.
ಇದರಿಂದ ಸುಪ್ರೀಂ ಕೋರ್ಟ್‌ನ ಎಲ್ಲಾ 34 ಜಡ್ಜ್‌ಳ ಹುದ್ದೆ ಭರ್ತಿ ಆದಂತಾಗಿದೆ.ಈ ಹಿಂದಿನ ಸಿಜೆಐ ಸಂಜೀವ್ ಖನ್ನಾ, ನ್ಯಾ। ಎಸ್. ಓಕಾ ಮತ್ತು ನ್ಯಾ। ಹೃಷಿಕೇಶ್ ರಾಯ್ ನಿವೃತ್ತಿಯಿಂದ ತೆರವಾಗಿದ್ದ ಹುದ್ದೆಗೆ ಮೂವರ ಹೆಸರನ್ನು ಸೋಮವಾರ ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರ ಗುರುವಾರ ಮೂವರು ನ್ಯಾಯಾಧೀಶರನ್ನು ನೇಮಿಸಿ ಅಧಿಸೂಚನೆ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಸಿಜೆಐ ಬಿ. ಆರ್. ಗವಾಯಿ ಅವರು ಮೂವರಿಗೆ ಪ್ರಮಾಣ ವಚನ ಬೋಧಿಸಿದರು.