ಸಾರಾಂಶ
ನವದೆಹಲಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೂ ಆಗಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನಿವೃತ್ತಿ ಹೊಂದಿದ್ದಾರೆ. ಅವರನ್ನು ಶುಕ್ರವಾರ ಬೀಳ್ಕೊಡಲಾಯಿತು.ಸುಪ್ರೀಂ ಕೋರ್ಟ್‌ನಲ್ಲಿ ಮೂರನೇ ಹಿರಿಯ ಜಡ್ಜ್ ಆಗಿದ್ದ ನ್ಯಾ। ಓಕಾ ಅವರು ಮೇ 24 ರಂದು ನಿವೃತ್ತಿಯಾಗಲಿದ್ದು, ರಜಾ ದಿನ ಕಾರಣ ಒಂದು ದಿನ ಮುಂಚೆಯೇ ಸಿಜೆಐ ಸೇರಿದಂತೆ ಇತರ ನ್ಯಾಯಾಧೀಶರ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.
ಸುಮಾರು 2 ದಶಕ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ್ದ ಅವರು 2021ರ ಆ.31ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮುನ್ನ ಅವರು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಮತ್ತು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
2 ರಾಜ್ಯಗಳಲ್ಲಿ ಮತ್ತೆ 5 ನಕ್ಸಲೀಯರ ಹತ್ಯೆ
- ಮಹಾರಾಷ್ಟ್ರದಲ್ಲಿ 4, ಛತ್ತೀಸ್‌ಗಢದಲ್ಲಿ ಒಬ್ಬನ ಸಂಹಾರಗಡ್ಚಿರೋಲಿ/ಸುಕ್ಮಾ: ನಕ್ಸಲ್ ವಿರುದ್ಧದ ಸಮರ ಮುಂದುವರೆದಿದ್ದು , ಶುಕ್ರವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ. ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರನ್ನು, ಹಾಗೂ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಬ್ಬನನ್ನು ಹತ್ಯೆ ಮಾಡಲಾಗಿದೆ,
ಬುಧವಾರವಷ್ಟೇ ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಬೃಹತ್ ಕಾರ್ಯಾಚರಣೆಯಲ್ಲಿ ದೇಶದ ನಂ.1 ನಕ್ಸಲ್ ನಾಯಕ ಬಸವರಾಜು ಸೇರಿ 27 ನಕ್ಸಲರ ಸಂಹರಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ಯಶಸ್ಸು ಭದ್ರತಾ ಪಡೆಗಳಿಗೆ ಸಿಕ್ಕಿದೆ.ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಗಡಿಯ ಗಡ್ಚಿರೋಲಿ ಜಿಲ್ಲೆಯ ಕವಾಂಡೆ ಪ್ರದೇಶದಲ್ಲಿ ಮಾವೋವಾದಿಗಳ ಸುಳಿವು ಸಿಕ್ಕಿತ್ತು. ಇದರಂತೆ ಪೊಲೀಸರ ವಿಶೇಷ ಕಮಾಂಡೋ ಘಟಕ ಸಿ-60ಯ 300 ಸಿಬ್ಬಂದಿ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ನಕ್ಸಲರು ಮತ್ತು ಸಿಬ್ಬಂದಿ ನಡುವೆ ಸುಮಾರು 3 ಗಂಟೆ ಗುಂಡಿನ ಚಕಮಕಿ ನಡೆದಿದ್ದು, 4 ಮಾವೋವಾದಿಗಳು ಬಲಿಯಾಗಿದ್ದಾರೆ. ಮೃತ ನಕ್ಸಲರಿಂದ ಸ್ವಯಂ ಲೋಡಿಂಗ್ ರೈಫಲ್. 303 ರೈಫಲ್ , ವಾಕಿ ಟಾಕಿ, ಗನ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಛತ್ತೀಸ್‌ಗಡದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯ ಗಡಿಯ ತುಮ್ರಲ್ ಕಾಡಿನಲ್ಲಿ ಓರ್ವ ನಕ್ಸಲ್ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾನೆ. ಘಟನೆಯಲ್ಲಿ ಓರ್ವ ಕೋಬ್ರಾ ಕಮಾಂಡೋ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಇಲ್ಲಿನ ಬಸ್ತಾರ್ ಪ್ರದೇಶದಲ್ಲಿ 33 ನಕ್ಸಲರು ಶರಣಾಗಿದ್ದಾರೆ. ಈ ಪೈಕಿ 9 ಮಹಿಳೆಯರು ಸೇರಿದಂತೆ 24 ನಕ್ಸಲರು ತಲೆಗೆ 91 ಲಕ್ಷ ರು. ಬಹುಮಾನ ಹೊಂದಿದ್ದರು.