ಕಲಬುರಗಿ ಹೈಕೋರ್ಟ್‌ ಫೈವ್‌ಸ್ಟಾರ್‌ ಹೋಟೆಲ್‌ನಂತಿದೆ : ಸುಪ್ರೀಂ ಜಡ್ಜ್‌ ಅಭಯ್‌ ಓಕಾ

| N/A | Published : Feb 16 2025, 01:46 AM IST / Updated: Feb 16 2025, 05:12 AM IST

ಕಲಬುರಗಿ ಹೈಕೋರ್ಟ್‌ ಫೈವ್‌ಸ್ಟಾರ್‌ ಹೋಟೆಲ್‌ನಂತಿದೆ : ಸುಪ್ರೀಂ ಜಡ್ಜ್‌ ಅಭಯ್‌ ಓಕಾ
Share this Article
  • FB
  • TW
  • Linkdin
  • Email

ಸಾರಾಂಶ

 ಕೋರ್ಟುಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಸದಾ ಮುಂದಿದೆ. ಕಲಬುರಗಿ ಹೈಕೋರ್ಟ್‌ ಪೀಠ ಫೈವ್‌ಸ್ಟಾರ್‌ ಹೋಟೆಲ್‌ನಂತಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ। ಅಭಯ್‌ ಓಕಾ ಹೇಳಿದ್ದಾರೆ.

  ಮುಂಬೈ : ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಮಹಾರಾಷ್ಟ್ರದಲ್ಲಿನ ಸರ್ಕಾರ ವಿಫಲವಾಗಿದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಇಲ್ಲ. ಕೋರ್ಟುಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಸದಾ ಮುಂದಿದೆ. ಕಲಬುರಗಿ ಹೈಕೋರ್ಟ್‌ ಪೀಠ ಫೈವ್‌ಸ್ಟಾರ್‌ ಹೋಟೆಲ್‌ನಂತಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ। ಅಭಯ್‌ ಓಕಾ ಹೇಳಿದ್ದಾರೆ.

ಶನಿವಾರ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಕೋರ್ಟುಗಳಿಗೆ ಮೂಲಸೌಕರ್ಯ ಪಡೆಯುವಲ್ಲಿ ನಾವು ಪರದಾಡಿದ್ದೆವು. ಮಹಾರಾಷ್ಟ್ರ ಸರ್ಕಾರ ಸೌಲಭ್ಯಗಳನ್ನೇ ನೀಡುತ್ತಿರಲಿಲ್ಲ. ಪುಣೆ ಸಿವಿಲ್‌ ಕೋರ್ಟ್‌ನಲ್ಲಿ ಜಡ್ಜ್‌ಗಳಿಗೆ ಪ್ರತ್ಯೇಕ ಚೇಂಬರ್‌ ಕೂಡ ಇರಲಿಲ್ಲ’ ಎಂದರು.

ಆದರೆ ಕಳೆದ 5 ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಮಹಾರಾಷ್ಟ್ರದಲ್ಲಿ ಕಳೆದ 4 ವರ್ಷದಿಂದ ಶಿವಸೇನೆ-ಬಿಜೆಪಿ ಸರ್ಕಾರ ಇದೆ ಎಂಬುದು ಇಲ್ಲಿ ಗಮನಾರ್ಹ.

ಕಲಬುರಗಿ ಪೀಠ ಫೈವ್‌ಸ್ಟಾರ್‌ ಹೋಟೆಲ್‌:

ಇದೇ ವೇಳೆ ಕರ್ನಾಟಕ ಸರ್ಕಾರ ಕೋರ್ಟುಗಳಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸುತ್ತಿದೆ ಎಂದು ಹೊಗಳಿದ ಅವರು ಕಲಬುರಗಿ ಹೈಕೋರ್ಟ್‌ ಪೀಠವು ಪಂಚತಾರಾ ಹೋಟೆಲ್‌ನಂತಿದೆ ಎಂದು ಪ್ರಶಂಸಿಸಿದರು.

ಕರ್ನಾಟಕದಲ್ಲಿ ಮಹಾರಾಷ್ಟ್ರದ ರೀತಿಯ ಪರಿಸ್ಥಿತಿ ಇಲ್ಲ. ನಾವು ಕೋರ್ಟುಗಳಿಗೆ ಯಾವ ಸೌಲಭ್ಯ ಕೇಳುತ್ತೇವೋ ಆ ಸೌಲಭ್ಯವನ್ನು ಕರ್ನಾಟಕ ಸರ್ಕಾರ ನೀಡುತ್ತದೆ ಎಂದರು.

ಓಕಾ ಅವರು ಈ ಹಿಂದೆ ಬಾಂಬೆ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದರು. ಬಳಿಕ ಕರ್ನಾಟಕ 2019ರಿಂದ 2021ರವರೆಗೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಬಳಿಕ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.