ನೀಟ್‌ ವಿರುದ್ಧ 3ನೇ ರಾಜ್ಯದಿಂದ ನಿರ್ಣಯ ಅಂಗೀಕಾರ

| Published : Jul 25 2024, 01:19 AM IST

ಸಾರಾಂಶ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ರದ್ದುಗೊಳಿಸಿ ರಾಜ್ಯಗಳಿಗೇ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.

ಕೋಲ್ಕತಾ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ರದ್ದುಗೊಳಿಸಿ ರಾಜ್ಯಗಳಿಗೇ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.ಇದರೊಂದಿಗೆ ತಮಿಳುನಾಡು ಹಾಗೂ ಕರ್ನಾಟಕದ ಬಳಿಕ ಇಂಥ ನಿರ್ಣಯ ಅಂಗೀಕರಿಸಿದ 3ನೇ ರಾಜ್ಯ ಎನ್ನಿಸಿಕೊಂಡಿದೆ. ಈ ಮೂಲಕ ನೀಟ್‌ ವಿಚಾರದಲ್ಲಿ ರಾಜ್ಯ-ಕೇಂದ್ರ ಸಂಘರ್ಷ ತಾರಕಕ್ಕೇರಿದೆ.ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರದ ವೇಳೆ ಮಾತನಾಡಿದ ಬೃತ್ಯ ಬಸು, ‘ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರೇ ನೀಟ್‌ ಅನ್ನು ಕೇಂದ್ರ ಸರ್ಕಾರ ನಡೆಸಬಾರದು ಎಂದು ವಾದಿಸಿದ್ದರು. ಆಗ ನಾವೂ ನೀಟ್ ವಿರೋಧಿಸಿದ್ದೆವು. ಆದರೆ ನಂತರ ಮೋದಿ ಮನಸ್ಸು ಬದಲಿಸಿ ನೀಟ್‌ಗೆ ಕೈಜೋಡಿಸುವಂತೆ ನಮಗೆ ಮನವೊಲಿಸಿದ್ದರು’ ಎಂದು ಆರೋಪಿಸಿದರು.4 ವಿಪಕ್ಷ ಸಿಎಂ ಬಹಿಷ್ಕಾರ:

ಈ ನಡುವೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಲತಾಯಿ ಧೋರಣೆ ತಾಳಿದೆ ಎಂದು ಆರೋಪಿಸಿ ಜು.27ರಂದು ನಡೆಯಲಿರುವ ನೀತಿ ಆಯೋಗದ ಸಭೆ ಬಹಿಷ್ಕರಿಸುವುದಾಗಿ ಆಂಧ್ರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.