3ನೇ ಹಂತದಲ್ಲಿ ಶೇ.61.5ರಷ್ಟು ಮತದಾನ

| Published : May 08 2024, 01:06 AM IST

ಸಾರಾಂಶ

11 ರಾಜ್ಯಗಳ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಬಂಗಾಳದಲ್ಲಿ ಸಣ್ಣಪುಟ್ಟ ಹಿಂಸೆ ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿ ಗಣ್ಯರಿಂದ ಮತದಾನ ಚಲಾವಣೆಯಾಗಿರುವುದು ಈ ಹಂತದ ವಿಶೇಷ.

ನವದೆಹಲಿ: 11 ರಾಜ್ಯಗಳ 93 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ 3ನೇ ಹಂತದ ಚುನಾವಣೆಯಲ್ಲಿ ಶೇ.61.5ರಷ್ಟು ಮತದಾನವಾಗಿದೆ. ಆದರೆ ಇನ್ನಷ್ಟು ನಿಖರ ಪ್ರಮಾಣ ಬುಧವಾರ ಗೊತ್ತಾಗುವ ನಿರೀಕ್ಷೆ ಇದೆ.

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ನಡೆದ ಸಣ್ಣಪುಟ್ಟ ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿ ಉಳಿದಂತೆ ದೇಶವ್ಯಾಪಿ ಮತದಾನ ಶಾಂತಿಯುತವಾಗಿತ್ತು. ಇನ್ನು ಅಲ್ಲಲ್ಲಿ ಮತಯಂತ್ರ ಕೈಕೊಟ್ಟ ಕೆಲ ಘಟನೆಗಳು ಕೂಡಾ ಮತದಾನಕ್ಕೆ ಸಾಕ್ಷಿಯಾದವು.

ಮೂರನೇ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಮುಕ್ತಾಯಗೊಂಡಂತೆ ಆಗಿದೆ. ಇನ್ನೂ 4 ಹಂತದ ಚುನಾವಣೆ ಬಾಕಿ ಇದ್ದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಅಸ್ಸಾಂನಲ್ಲಿ ಅತಿ ಹೆಚ್ಚು ಶೇ.75ರಷ್ಟು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ ಅತಿಕಡಿಮೆ ಶೇ.54ರಷ್ಟು ಮತ ಚಲಾವಣೆಯಾಗಿದೆ.

ಮೋದಿ ಮತ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಜರಾತ್‌ನ ಗಾಂಧೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಚಲಾವಣೆ ಮಾಡಿದರು.ಪ್ರಮುಖರು:ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮನ್‌ಸುಖ್‌ ಮಾಂಡವೀಯ, ಪರಶೋತ್ತಮ ರೂಪಾಲ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸುಪ್ರಿಯಾ ಸುಳೆ, ಡಿಂಪಲ್‌ ಯಾದವ್‌ ಚುನಾವಣೆಯ ಕಣದಲ್ಲಿರುವ ಪ್ರಮುಖ ಸ್ಪರ್ಧಾಳುಗಳು.

ಎಲ್ಲೆಲ್ಲಿ ಚುನಾವಣೆ?:

ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್‌, ದಾದ್ರಾ ಮತ್ತು ನಗರ್‌ ಹವೇಲಿ, ದಮನ್ ಮತ್ತು ದಿಯು,